Mar 14, 2024, 5:44 PM IST
ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಚುನಾವಣಾ ಆಯೋಗ ಯಾವುದೇ ಸಮಯದಲ್ಲಿ ಎಲೆಕ್ಷನ್ ಡೇಟ್ ಘೋಷಣೆ ಮಾಡಬಹುದು. ಅದಾಗಲೇ ಎಲ್ಲಾ ಪಕ್ಷಗಳೂ ಕೂಡ ಸಮರಾಭ್ಯಾಸವನ್ನ ಶುರು ಮಾಡಿವೆ. ಕಾಂಗ್ರೆಸ್(Congress) ಪಕ್ಷ ಕರ್ನಾಟಕದಲ್ಲಿ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆಯನ್ನೂ ಮಾಡಿ ಗೆಲುವಿನ ಲೆಕ್ಕಾಚಾರದಲ್ಲಿದೆ. ಇನ್ನೊಂದು ಕಡೆ ಜೆಡಿಎಸ್(JDS) ಜೊತೆಗೆ ಮೈತ್ರಿ ಮಾಡಿಕೊಂಡಿರೋ ಬಿಜೆಪಿ(BJP) ಈಗ 20 ಕ್ಷೇತ್ರಗಳ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಕರ್ನಾಟಕ(Karnataka) ಬಿಜೆಪಿ ಕೇಂದ್ರದಿಂದ ಟಿಕೆಟ್ ಲಿಸ್ಟ್ ಸಲುವಾಗಿ ಕಾಯ್ತಾ ಇತ್ತು. ಒಟ್ಟೂ 20 ಕ್ಷೇತ್ರಗಳ ಲಿಸ್ಟ್ ಬಿಟ್ಟು ಉಳಿದ 8 ಕ್ಷೇತ್ರಗಳನ್ನ ಕಾಯ್ದಿರಿಸಿಕೊಂಡಿದ್ದಾರೆ ಕೇಸರಿ ಹೈಕಮಾಂಡ್. ಮೈತ್ರಿ ಧರ್ಮವನ್ನ ಪಾಲನೆ ಮಾಡ್ತಾ ಇರೋ ಬಿಜೆಪಿ ಜೆಡಿಎಸ್ ಕ್ಷೇತ್ರಗಳು ಇನ್ನೂ ಸಸ್ಪೆನ್ಸ್. ಈ ಬಾರಿ ತುಂಬಾನೇ ಚರ್ಚೆಗೆ ಕಾರಣವಾಗಿದ್ದ ಕ್ಷೇತ್ರ ಅಂದ್ರೆ ಅದು ಮೈಸೂರು. ಈ ಬಾರಿ ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಅನುಮಾನ ಅನ್ನೋ ಸುದ್ದಿಯನ್ನ ಸುವರ್ಣ ನ್ಯೂಸ್ಪ್ರಸಾರ ಮಾಡಿತ್ತು. ಅಂತೇಯೇ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಮಿಸ್ ಆಗಿದೆ. ಅವರ ಜಾಗಕ್ಕೆ ಯದುವೀರ್ ಒಡೆಯರ್ ಬಂದಿದ್ದಾರೆ. ಇನ್ನೊಂದು ಕಡೆಯಲ್ಲಿ ಕಾಂಗ್ರೆಸ್ಸಿನಲ್ಲೂ ಕೂಡ ಮೈಸೂರು(Mysore) ಕ್ಷೇತ್ರಕ್ಕಾಗಿ ಟಿಕೆಟ್ ಫೈಟ್ ಜೋರಾಗಿದೆ. ಎಂ ಲಕ್ಷ್ಮಣ್ ಈ ಬಾರಿ ಮೈಸೂರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ಹಾಲಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಗಟ್ಟಿ ಧ್ವನಿಯಲ್ಲಿ ಪ್ರಶ್ನೆ ಮಾಡಿದವರಲ್ಲಿ ಲಕ್ಷ್ಮಣ್ ಕೂಡ ಒಬ್ಬರು. ಅತ್ತ ಡಾ ವಿಜಯ್ ಕುಮಾರ್ ಕೂಡ ಕೈ ಪಾಳಯದ ಅಭ್ಯರ್ಥಿ ಆಗೋಕೆ ಉತ್ಸುಕರಾಗಿದ್ದಾರೆ. ಸದ್ಯ ಮೈಸೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿರುವ ಡಾ ವಿಜಯ್ ಕುಮಾರ್ ಹೆಸರು ಹಸ್ತ ಪಾಳಯದಲ್ಲಿ ಕೇಳಿ ಬರ್ತಾ ಇದೆ.
ಇದನ್ನೂ ವೀಕ್ಷಿಸಿ: ದೇವೇಗೌಡರ, ಕುಮಾರಸ್ವಾಮಿ ಪಾರ್ಟಿ ಸರಿ ಇಲ್ಲ ಅಂತ ಬುದ್ಧಿವಂತ ಅಳಿಯ ತೀರ್ಮಾನ ಮಾಡಿದ್ದಾರೆ: ಡಿಕೆ ಸುರೇಶ್