ಕರಾವಳಿಯಲ್ಲಿ ಕೇಸರಿ ಪಾಳಯದ ಹೊಸ ಅಸ್ತ್ರ: ಕಾರ್ಯಕರ್ತರಿಗೆ ಹೊಸ ಸಂದೇಶ ನೀಡಿದ ಬಿಜೆಪಿ

Apr 27, 2023, 1:36 PM IST

ಮಂಗಳೂರು:  ಎಲೆಕ್ಷನ್ ಟೈಮಲ್ಲೇ ಪ್ರವೀಣ್ ನೆಟ್ಟಾರು ಹೊಸ ಮನೆ ಗೃಹ ಪ್ರವೇಶ ಮಾಡುವ ಮೂಲಕ ಚುನಾವಣೆ ಹೊತ್ತಲ್ಲಿ ಕರಾವಳಿಯಲ್ಲಿ ಬಿಜೆಪಿ ಮತ್ತೊಂದು ಹೊಸ ಅಸ್ತ್ರ ಪ್ರಯೋಗ ಮಾಡಿದೆ. ಕಳೆದ ವರ್ಷ ದುಷ್ಕರ್ಮಿಗಳಿಂದ ಪ್ರವೀಣ್ ನೆಟ್ಟಾರು ಹತ್ಯೆಯಾದಾಗ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪಕ್ಷದ ಕಾರ್ಯಕರ್ತರೇ ತಿರುಗಿ ಬಿದ್ದಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಅವರ ಕಾರನ್ನು ಬಿಜೆಪಿ ಕಾರ್ಯಕರ್ತರು ಗಡಗಡನೇ ಅಲುಗಿಸಿದ್ದರು. ಆ ವೇಳೆ ಪಕ್ಷಕ್ಕಾದ ಡ್ಯಾಮೇಜ್‌ನ್ನು ಈಗ ಬಿಜೆಪಿ ನಾಯಕರು ಮನೆ ಕಟ್ಟಿಕೊಡುವ ಮೂಲಕ ಸರಿ ಪಡಿಸುವ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ಹತ್ಯೆಯಾದ ಕಾರ್ಯಕರ್ತನ ಕುಟುಂಬದ ಪರ ನಿಂತಿದ್ದೇವೆ ಎಂದು ಸಂದೇಶವನ್ನು ಬಿಜೆಪಿ ಸಾರಿದೆ.  60 ಲಕ್ಷ ವೆಚ್ಚದ ಈ ಮನೆಯ ಗೃಹ ಪ್ರವೇಶ ನಿನ್ನೆ ನಡೆದಿತ್ತು.  2,700 ಚ.ಅಡಿಯ ಮನೆಯನ್ನು ಮುಗ್ರೋಡಿ ಕನ್ಸ್ಟ್ರಕ್ಷನ್ ಸಂಸ್ಥೆ  ನಿರ್ಮಾಣ ಮಾಡಿತ್ತು. ಕಳೆದ ವರ್ಷ ಜುಲೈ 26 ರಂದು ಬೆಳ್ಳಾರೆ ಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದರು.