Aug 25, 2021, 9:50 PM IST
ಬಾಗಲಕೋಟೆ, (ಆ.25): ದೇಶದಲ್ಲಿ ಕಳೆದ ಹಲವು ದಿನಗಳಿಂದ ಬೆಲೆ ಏರಿಕೆಯದ್ದೇ ಸುದ್ದಿ. ಈರುಳ್ಳಿ, ಮೊಟ್ಟೆ, ತರಕಾರಿ ಸೇರಿದಂತೆ ಹಲವು ದಿನನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಬಡ ಜನರು ಕಂಗಾಲಾಗಿದ್ದಾರೆ.
ಬೆಲೆ ಏರಿಕೆ ಖಂಡಿಸಿ ಬಿಜೆಪಿ ಬೂತ್ ಅಧ್ಯಕ್ಷ ರಾಜೀನಾಮೆ, ನಾಯಕರಿಗೆ ಇರುಸು ಮುರುಸು
ಅಲ್ಲದೇ ಡೀಸೆಲ್, ಪೆಟ್ರೋಲ್ ಹಾಗೂ ಗ್ಯಾಸ್ ಬೆಲೆ ಕೂಡ ಗಗನಕ್ಕೇರಿದೆ. ಇದರಿಂದ ಬಡ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬೆಲೆ ಏರಿಕೆ ಖಂಡಿಸಿ ಬಾಗಲಕೋಟೆಯಲ್ಲಿ ಮಹಿಳಾ ಕಾಂಗ್ರೆಸ್ ಪ್ರತಿಭಟನೆ ಮಾಡಿದೆ. ರೆಸ್ತೆಯಲ್ಲಿ ಅಡುಗೆ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.