Dec 10, 2019, 11:44 AM IST
ಬೆಂಗಳೂರು (ಡಿ.10): ಉಪಚುನಾವಣೆಯ ಸೋಲಿನಿಂದ ಕಾಂಗ್ರೆಸ್ ಕಂಗಾಲಾಗಿದೆ. ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಮತ್ತು ಈಶ್ವರ್ ಖಂಡ್ರೆ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ಮುಂದೆ ಬೆಟ್ಟದಷ್ಟು ಸವಾಲುಗಳಿವೆ. ಹಾಗಾಗಿ, ಮುಂದಿನ ಪ್ಲಾನ್ ರೂಪಿಸುತ್ತಿದೆ. ಇಲ್ಲಿದೆ ಮತ್ತಷ್ಟು ಮಾಹಿತಿ....
ಡಿ.05ರಂದು 15 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ನಿನ್ನೆ (ಡಿ.09) ಪ್ರಕಟವಾಗಿದೆ. ಬಿಜೆಪಿ 12 ಸ್ಥಾನಗಳನ್ನು ಗಳಿಸಿದರೆ, ಕಾಂಗ್ರೆಸ್ ಕೇವಲ 2 ಸ್ಥಾನಗಳನ್ನು ಪಡೆದಿದೆ. ಒಂದು ಸ್ಥಾನ ಜೆಡಿಎಸ್ ಬೆಂಬಲಿತ ಪಕ್ಷೇತರರ ಪಾಲಾಗಿದೆ.