ಮಹಾರಾಷ್ಟ್ರದ ಸಿಂಹಾಸನಕ್ಕೆ ದೇವೇಂದ್ರನ ಹೆಸರು ಫಿಕ್ಸ್‌, ಮೂರನೇ ಬಾರಿಗೆ ಅಧಿಕಾರ

Dec 4, 2024, 1:45 PM IST

ಮುಂಬೈ (ಡಿ.4): ಮಹಾರಾಷ್ಟ್ರ ಚುನಾವಣೆಯ ಫಲಿತಾಂಶ ಬಂದು 12 ದಿನಗಳಾದ ಬಳಿಕ ಬಿಜೆಪಿಯ ನಾಯಕ ದೇವೇಂದ್ರ ಫಡ್ನವಿಸ್‌ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಅಂತಿಮವಾಗಿದೆ. 

ವಿಧಾನಸಭೆ ಚುನಾವಣೆಯಲ್ಲಿ 230 ಸೀಟ್‌ಗಳನ್ನು ಗೆಲ್ಲುವ ಮೂಲಕ ಬಿಜೆಪಿ ನೇತೃತ್ವದ ಮಹಾಯುತಿ ಮಹಾರಾಷ್ಟ್ರದಲ್ಲಿ ಅಧಿಕಾರ ಪಡೆದುಕೊಂಡಿತ್ತು. 

ಫೋನ್‌ ಕಸಿದುಕೊಂಡು ಕಾಲ್‌ ರಿಸೀವ್‌ ಮಾಡಿದ ಕೋತಿ.. 'ಹಲೋ' ಅಂತಾ ಹೇಳೋದೊಂದ್‌ ಬಾಕಿ!

ಬುಧವಾರ ಬಿಜೆಪಿ ಮೀಟಿಂಗ್‌ನಲ್ಲಿ ಈ ನಿರ್ಧಾರ ಅಂತಿಮವಾಗಿದೆ. ಅದರೊಂದಿಗೆ ಮಹಾರಾಷ್ಟ್ರದ ಸಿಎಂ ಯಾರಾಗಲಿದ್ದಾರೆ ಅನ್ನೋ ಕುತೂಹಲಕ್ಕೆ ಅಂತಿಮ ಮುದ್ರೆ ಬಿದ್ದಂತಾಗಿದೆ. ಎನ್‌ಸಿಪಿಯ ಅಜಿತ್‌ಪವಾರ್‌ ಹಾಗೂ ಶಿಂಧೆ ಶಿವಸೇನೆಯ ಏಕನಾಥ್‌ ಶಿಂಧೆ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.