2023ರ ಚುನಾವಣೆಗೆ ಕೈ ನಾಯಕರ ಟ್ರ್ಯಾಕ್ಟರ್ ಸವಾರಿ!

Oct 29, 2022, 11:52 PM IST

ಬೆಂಗಳೂರು (ಅ. 29): ಮೇಕೆದಾಟು ಪಾದಯಾತ್ರೆ, ಫ್ರೀಡಂ ಮಾರ್ಚ್‌ ಹಾಗೂ ಇತ್ತೀಚೆಗೆ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆಯ ಯಶಸ್ಸಿನಿಂದ ಬಲ ಪಡೆದಂತಿರುವ ರಾಜ್ಯ ಕಾಂಗ್ರೆಸ್‌ ಮತ್ತೊಂದು ಯಾತ್ರೆಯತ್ತ ಮುಖ ಮಾಡಿದೆ. ಬಿಜೆಪಿ ಜನಸಂಕಲ್ಪ ಯಾತ್ರೆ ಹಾಗೂ ಜೆಡಿಎಸ್‌ ಪಂಚರತ್ನ ಯಾತ್ರೆ ಮಾಡುತ್ತಿರುವ ಹೊತ್ತಿನಲ್ಲಿ ಕಾಂಗ್ರೆಸ್‌ ಟ್ರ್ಯಾಕ್ಟರ್‌ ಯಾತ್ರೆ ಆರಂಭ ಮಾಡಲಿದೆ.

2023ರ ಚುನಾವಣೆಗೆ ಕೈ ನಾಯಕರ ಟ್ರ್ಯಾಕ್ಟರ್ ಸವಾರಿ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಟ್ರ್ಯಾಕ್ಟರ್ ಯಾತ್ರೆಗೆ ಪ್ಲ್ಯಾನ್ ಮಾಡಲಾಗಿದೆ. ಸಿದ್ದರಾಮಯ್ಯ, ಡಿಕೆಶಿ ಪ್ರತ್ಯೇಕ ಪಾದಯಾತ್ರೆಗೆ ಕಾಂಗ್ರೆಸ್ ಪ್ಲಾನ್. ಉತ್ತರ-ದಕ್ಷಿಣ ದಿಕ್ಕಿನಲ್ಲಿ ಕಾಂಗ್ರೆಸ್ ಟ್ರ್ಯಾಕ್ಟರ್ ಯಾತ್ರೆಗೆ ತಯಾರಿ ನಡೆಯುತ್ತಿದೆ.

ಮೂರು ಪಕ್ಷ ಮೂರು ಯಾತ್ರೆ, ಮತದಾರರ ಓಲೈಕೆಗೆ ಪಕ್ಷಗಳ ಸರ್ಕಸ್‌!

ಎರಡು ದಿಕ್ಕಿನಿಂದ ಟ್ರಾಕ್ಟರ್ ಯಾತ್ರೆಗೆ ಹೈಕಮಾಂಡ್ ಗ್ರೀನ್‌ ಸಿಗ್ನಲ್‌ ಕೂಡ ಸಿಕ್ಕಿದೆ. ಸಿದ್ದರಾಮಯ್ಯ ಅವರ  ಪ್ರಸ್ತಾವನೆಗೆ ಕಾಂಗ್ರೆಸ್‌ ಹೈ ಕಮಾಂಡ್‌ ಕೂಡ ಒಪ್ಪಿದೆ. ಉತ್ತರ ಕರ್ನಾಟಕ ಭಾಗದಿಂದ ಸಿದ್ದರಾಮಯ್ಯ ಯಾತ್ರೆ ಮಾಡುವ ಸಾಧ್ಯತೆ ಇದೆ. ಸಿದ್ದು ಬಸವಕಲ್ಯಾಣದಿಂದ 371 ಜೆ ಯಾತ್ರೆ ಆರಂಭಿಸಬಹುದು ಎನ್ನಲಾಗಿದೆ. ಮತ್ತೊಂದು ಭಾಗದಿಂದ ಡಿಕೆಶಿ ಯಾತ್ರೆ ಮಾಡಲು ತಯಾರಿ ನಡೆಸಿದ್ದಾರೆ. ಡಿಕೆಶಿ ಮಹಾದಾಯಿ ಹೋರಾಟದ ಮುಂದಾಳತ್ವ ವಹಿಸೋ ಸಾಧ್ಯತೆ ಇದೆ. ಸದ್ಯದಲ್ಲೇ ಟ್ರಾಕ್ಟರ್ ಯಾತ್ರೆಗೆ ನಾಯಕರು ದಿನಾಂಕ ನಿಗದಿ ಮಾಡಲಿದ್ದಾರೆ.