Dec 16, 2019, 2:36 PM IST
ಬೆಂಗಳೂರು[ಡಿ.16]: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮನೆಯಲ್ಲಿ ಯಾಗವೊಂದು ನಡೆದಿದೆ. ಮೂರು ಗಂಟೆಗೂ ಹೆಚ್ಚು ಕಾಲ ನಡೆದ ಈ ಯಾಗದ ಉಸ್ತುವಾರಿ ವಹಿಸಿದ್ದು ಗೌರಿಗದ್ದೆಯ ವಿನಯ್ ಗುರೂಜಿ. ಅಷ್ಟಕ್ಕೂ ಬಿಎಸ್‌ವೈ ಮಾಡಿಸಿದ ಆ ಯಾಗ ಯಾವುದು? ಯಾಕಾಗಿ ಆ ಯಾಗ ನಡೆಯಿತು?
ಬಿಎಸ್‌ವೈ ಸರ್ಕಾರ ಈಗ ಸುಭದ್ರವಾಗಿದೆ. ಮೂರೂವರೆ ವರ್ಷ ಸರ್ಕಾರ ಅಲ್ಲಾಡಿಸುವುದು ಕಷ್ಟಸಾಧ್ಯ. ಹೀಗಾಗಿ ಸಿಎಂ ಯಡಿಯೂರಪ್ಪ ಫುಲ್ ಖುಷಿಯಾಗಿದ್ದಾರೆ. ಇದೇ ಖುಷಿಯಲ್ಲಿ ಸಿಎಂ ಮನೆಯಲ್ಲಿ ಯಾಗ ನಡೆದಿದ್ದು, ಇದರ ಸಾರಥ್ಯ ವಿನಯ್ ಗುರೂಜಿ ವಹಿಸಿದ್ದು ಇನ್ನೂ ವಿಶೇಷ. ಈ ಯಾಗದ ಹಿಂದೆ ಅಷ್ಟೇ ಪ್ರಮುಖ ಕಾರಣವೂ ಇದೆ. ಏನದು? ಇಲ್ಲಿದೆ ವಿವರ