Nov 6, 2023, 8:29 AM IST
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಸೋಮವಾರ, ನವಮಿ ತಿಥಿ, ಆಶ್ಲೇಷ ನಕ್ಷತ್ರ.
ಇಂದು ನವಮಿ ಇರುವುದರಿಂದ ಶಿವ-ಶಕ್ತಿಯರ ಆರಾಧನೆ ಮಾಡಿದ್ರೆ ಒಳ್ಳೆಯದಾಗಲಿದೆ. ನವಮಿ ತಿಥಿ ಅಮ್ಮನವರಿಗೆ ತುಂಬಾ ಇಷ್ಟವಾದದ್ದಾಗಿದೆ. ಆಶ್ಲೇಷ ನಕ್ಷತ್ರ ಇರುವುದರಿಂದ ಹತ್ತಿರದ ನಾಗ ಕ್ಷೇತ್ರಕ್ಕೆ ಹೋಗಿ ಎಳೆನೀರಿನ ಅಭಿಷೇಕ ಮಾಡಿಸಿ. ಬುಧ ಇಂದು ವೃಶ್ಚಿಕ ರಾಶಿಯನ್ನು ಪ್ರವೇಶ ಮಾಡಲಿದ್ದಾನೆ. ಇಂತಹ ಸಂದರ್ಭದಲ್ಲಿ ರಾಶಿಗಳಲ್ಲಿ ವ್ಯತ್ಯಾಸವಾಗಲಿದೆ. ಬುದ್ಧಿ, ಬಂಧುಗಳಲ್ಲಿ ಕಲಹ ಉಂಟಾಗುವ ಸಾಧ್ಯತೆ ಇರುತ್ತದೆ.
ಇದನ್ನೂ ವೀಕ್ಷಿಸಿ: ರಜನಿಕಾಂತ್ 171ನೇ ಚಿತ್ರಕ್ಕೆ ರಾಘವ ಲಾರೆನ್ಸ್ ವಿಲನ್..!