Panchanga: ಶ್ರಾವಣ ಇಂದು ಮುಕ್ತಾಯ, ಪಿತೃಕಾರ್ಯಕ್ಕೆ ಅತ್ಯುತ್ತಮ ದಿನ..

Aug 27, 2022, 9:10 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಶನಿವಾರ,ಮಖಾ ನಕ್ಷತ್ರ, ಅಮಾವಾಸ್ಯೆ ತಿಥಿ. ಇದನ್ನು ಬೆನಕನ ಅಮಾವಾಸ್ಯೆ ಎಂದೇ ಕರೆಯಲಾಗುತ್ತದೆ. ಇಂದು ಶ್ರಾವಣ ಮುಕ್ತಾಯ. ಇದು ಕಡೆಯ ಶ್ರಾವಣ ಶನಿವಾರ. ಮಖಾ ನಕ್ಷತ್ರದಲ್ಲಿ ಶನೈಶ್ಚರಿ ಅಮಾವಾಸ್ಯೆ ಕೃಷ್ಣಪಕ್ಷದಲ್ಲಿ ಬಂದಿರುವುದರಿಂದ ಇಂದು ಪಿತೃಗಳಿಗೆ ತರ್ಪಣ ಬಿಡುವುದು ಉತ್ಕೃಷ್ಟ ಫಲ ನೀಡಲಿದೆ. .

ಶನಿ ಅಮಾವಾಸ್ಯೆ 2022: 14 ವರ್ಷದ ಬಳಿಕ ಇಂಥದೊಂದು ಶುಭದಿನ, ದೋಷ ಕಳೆದುಕೊಳ್ಳಿ..

ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿ, ದ್ವಾದಶ ರಾಶಿಗಳ ಫಲಾಫಲವನ್ನೂ ತಿಳಿಸಿದ್ದಾರೆ ಜ್ಯೋತಿಷಿಗಳಾದ ಶ್ರೀಕಂಠ ಶಾಸ್ತ್ರಿಗಳು..