Apr 27, 2022, 8:17 AM IST
ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಪೂರ್ವಾಭಾದ್ರ ನಕ್ಷತ್ರ, ಇಂದು ಬುಧವಾರ. ಬುಧವಾರ-ದ್ವಾದಶಿ ಬಂದಿದ್ದು, ವಿಷ್ಣು ಸ್ಮರಣೆ, ಪಾರಾಯಣ, ಸಹಸ್ರನಾಮ ಪಠಣೆಗೆ ಪ್ರಶಸ್ತವಾದ ಕಾಲ. ಇಂದು ಶುಕ್ರ ಉಚ್ಛಸ್ಥಾನಕ್ಕೆ ಪಲ್ಲಟವಾಗುತ್ತಿದ್ದಾನೆ. ದ್ವಾದಶ ರಾಶಿಗಳ ಮೇಲೆ ಯಾವ ರೀತಿ ಪ್ರಭಾವ ಬೀರುತ್ತಿದ್ದಾನೆ ನೋಡೋಣ.