Apr 25, 2022, 8:31 AM IST
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಧನಿಷ್ಠ ನಕ್ಷತ್ರ, ಇಂದು ಸೋಮವಾರ. ಸೋಮವಾರ ಧನಿಷ್ಠ ಹಾಗೂ ದಶಮಿ ಬಂದಿರುವುದು ಶುಭವನ್ನು ಸೂಚಿಸುತ್ತದೆ. ಶುಭ ಕಾರ್ಯಗಳಿಗೆ ಪ್ರಶಸ್ತವಾದ ಕಾಲ. ಇಂದು ಸೋಮವಾರವಾದ್ದರಿಂದ ಈಶ್ವರನ ಪ್ರಾರ್ಥನೆಯನ್ನು ಮಾಡಿಕೊಳ್ಳಿ.