Jun 24, 2022, 8:36 AM IST
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಅಶ್ವಿನಿ ನಕ್ಷತ್ರ, ಇಂದು ಶುಕ್ರವಾರ. ಇಂದು ಬುಧ ಜಯಂತಿ. ನಮ್ಮ ಬುದ್ದಿ ಶಕ್ತಿ, ಧೀಶಕ್ತಿ, ಪಾಂಡಿತ್ಯ, ವಿದ್ಯಾಬುದ್ದಿ ಎಲ್ಲದಕ್ಕೂ ಬುಧನ ಅನುಗ್ರಹ ಬೇಕೇಬೇಕು. ಹಾಗಾಗಿ ಬುಧನಿಗೆ ನಮಸ್ಕಾರ, ವಂದನೆ ಸಲ್ಲಿಸಲು ಇದು ಪ್ರಶಸ್ತವಾದ ಕಾಲ. ಇನ್ನು ಶುಕ್ರವಾರವಾದ್ದರಿಂದ ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡುವುದರಿಂದ ಮನೆಯಲ್ಲಿನ ಮನಸ್ತಾಮ, ಕಲಹಗಳನ್ನು ದೂರ ಮಾಡುತ್ತದೆ.