ಪಂಚಾಂಗ : ಇಂದು ಸುಬ್ರಹ್ಮಣ್ಯ ಷಷ್ಠಿಯಾಗಿದ್ದು ನಾವು ಮಾಡಬೇಕಾಗಿದ್ದೇನು? ಹೇಗಿದೆ ಆಚರಣೆ?

Dec 20, 2020, 8:48 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಇಂದಿನ ಪಂಚಾಂಗ ಫಲವೇನಿದೆ? ನೋಡೋಣ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಷಷ್ಠಿ ತಿಥಿ, ಶತಭಿಷ ನಕ್ಷತ್ರ, ಮಾರ್ಗಶಿರ ಮಾಸದ ಷಷ್ಠಿಯನ್ನು ಸುಬ್ರಹ್ಮಣ್ಯ ಷಷ್ಠಿ/ ಸ್ಕಂದ ಷಷ್ಠಿ ಎಂದು ಕರೆಯಲಾಗುತ್ತದೆ. ಯಥಾ ಶಕ್ತಿ, ಯಥಾ ಭಕ್ತಿಯಿಂದ ಪ್ರಾರ್ಥಿಸಿದರೆ, ಪೂಜಿಸಿದರೆ ವಿಶಿಷ್ಟ ಫಲಗಳಿದ್ದಾವೆ. ಬ್ರಹ್ಮಚಾರಿಗಳನ್ನು ಕರೆದು ಅವರಿಗೆ ವಸ್ತ್ರ, ಭೋಜನಾದಿಗಳನ್ನು ಕೊಡುವುದರಿಂದ ವಿಶೇಷ ಪುಣ್ಯ ಪ್ರಾಪ್ತಿಯಾಗುವುದು. 

ದಿನ ಭವಿಷ್ಯ : ಈ ರಾಶಿಯವರಿಗೆ ಸಹೋದರರೊಂದಿಗೆ ಭಿನ್ನಾಭಿಪ್ರಾಯ, ಅಂಜಿಕೆ ಇರಲಿದೆ.