May 16, 2022, 8:36 AM IST
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಪೌರ್ಣಮಿ ತಿಥಿ, ವಿಶಾಖ ನಕ್ಷತ್ರ, ಇಂದು ಸೋಮವಾರ. ಇಂದು ಬುದ್ಧ ಪೂರ್ಣಿಮೆ. ಎಲ್ಲ ಧರ್ಮಗಳೂ ಆಯಾ ಧರ್ಮಕ್ಕೆ ಸೇರಿದ ದೇವರ ಬಗ್ಗೆಯೇ ಹೇಳುತ್ತ, ಆ ದೇವರನ್ನು ಆರಾಧಿಸಿ ಮೋಕ್ಷ ಪಡೆಯಿರಿ ಎಂದು ಉಪದೇಶಿಸುತ್ತಿದ್ದರೆ ಬುದ್ಧ ಮಾತ್ರ ಯಾರನ್ನೂ ಪೂಜಿಸದೆ ನಿಮ್ಮಲ್ಲಿ ನೀವು ನಂಬಿಕೆಯಿಟ್ಟು ಸದ್ಗತಿ ಪಡೆಯಿರಿ ಎಂದು ಬೋಧಿಸಿದ. ಆದ್ದರಿಂದಲೇ ಅವನು ಪರಮ ಗುರುವಾದ.