Panchanga: ಇಂದು ಬೃಹಸ್ಪತಿ/ಗುರು ಜಯಂತಿ, ಗುರು ಕೃಪೆಗೆ ಹೀಗೆ ಮಾಡಿ

May 12, 2022, 8:34 AM IST

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಉತ್ತರ ನಕ್ಷತ್ರ, ಇಂದು ಗುರುವಾರ. ಇಂದು ಬೃಹಸ್ಪತಿ ಜಯಂತಿ ಬಂದಿರುವುದು ವಿಶೇಷ ಸಂಗತಿ. ಗುರುವಿನ ಅನುಗ್ರಹ ಇದ್ರೆ ಸಕಲವೂ ಒಳಿತಾಗುವುದು. ನಮ್ಮಲ್ಲಿನ ಧೀಶಕ್ತಿ ಜಾಗೃತವಾಗಬೇಕೆಂದರೆ, ಬುದ್ಧಿ, ವೃತ್ತಿ, ಹಣ ಬಲ ಎಲ್ಲದಕ್ಕೂ ಗುರುವಿನ ಅನುಗ್ರಹ ಬೇಕೇಬೇಕು. ಹಾಗಾಗಿ ಗುರುವಿನ ಪ್ರಾರ್ಥನೆ, ಆರಾಧನೆ ಮಾಡಿಕೊಳ್ಳಿ.