Aug 10, 2022, 8:33 AM IST
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಪೂರ್ವಾಷಾಢ ನಕ್ಷತ್ರ, ಇಂದು ಬುಧವಾರ. ಇಷ್ಟು ದಿನ ಮೇಷದಲ್ಲಿದ್ದ ಕುಜ, ವೃಷಭ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಜೊತೆಗೆ ಇಂದು ಕುಜನ ಜಯಂತಿಯೂ ಹೌದು. ಇಂತಹ ದಿನ ಕುಜನ ಆರಾಧನೆ ಮಾಡಬೇಕು. ಕೆಂಪು ವಸ್ತ್ರದಲ್ಲಿ ತೊಗರಿಯನ್ನು ತುಂಬಿ, ಸುಬ್ರಹ್ಮಣ್ಯ ಸನ್ನಿಧಾನದಲ್ಲಿ ಅರ್ಪಿಸಿದರೆ ಕುಜನ ಅನುಗ್ರಹಕ್ಕೆ ಪಾತ್ರರಾಗಬಹುದು.