Panchanga: ಅಷ್ಟಮಿಯುಕ್ತ ಸೋಮವಾರ, ಶಿವಶಕ್ತಿಯರ ಆರಾಧನೆಯಿಂದ ಇಷ್ಟಾರ್ಥ ಸಿದ್ಧಿ

May 9, 2022, 8:27 AM IST

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿ, ಆಶ್ಲೇಷ ನಕ್ಷತ್ರ, ಇಂದು ಸೋಮವಾರ. ಸೋಮವಾರ ಅಷ್ಟಮಿಯುಕ್ತವಾಗಿರುವುದರಿಂದ ಶಿವಶಕ್ತಿಯರ ಪಾರಾಯಣ ಮಾಡಬೇಕು. ಶಿವನಿಲ್ಲದೇ ಶಕ್ತಿಯಿಲ್ಲ, ಶಕ್ತಿಯಿಲ್ಲದೇ ಶಿವನಿಲ್ಲ. ಇವರಿಬ್ಬರ ಅನುಗ್ರಹದಿಂದ ಇಷ್ಟಾರ್ಥ ಪ್ರಾಪ್ತಿಯಾಗುವುದು.