May 8, 2022, 8:26 AM IST
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ನಕ್ಷತ್ರ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಪುಷ್ಯ ನಕ್ಷತ್ರ, ಇಂದು ಭಾನುವಾರ. ಆದಿತ್ಯವಾರ, ಸಪ್ತಮಿ ತಿಥಿ ಬಂದಿರುವುದು ಬಹಳ ಶ್ರೇಯಸ್ಕರ. ಈ ದಿನ ಸೂರ್ಯೋಪಾಸನೆ ಮಾಡಿಕೊಳ್ಳಿ. ಆರೋಗ್ಯಂ ಭಾಸ್ಕರಾದಿಚ್ಛೇತ್ ಎನ್ನುತ್ತಾರೆ. ಅರೋಗ್ಯಕ್ಕೆ ಸೂರ್ಯನ ಅನುಗ್ರಹ ಬೇಕೇ ಬೇಕು. ಹಾಗಾಗಿ ಸೂರ್ಯ ಪ್ರಾರ್ಥನೆ ಮಾಡಿಕೊಳ್ಳಿ.