Panchanga: ಶ್ರಾವಣ ಚತುರ್ಥಿ ನಾಗರ ಚೌತಿ, ದುರ್ವಾ ಗಣಪತಿ ವ್ರತ ಆಚರಣೆ ಕಾಲ

Aug 1, 2022, 8:33 AM IST

ಶುಭೋದಯ ಓದುಗರೇ, ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ, ಪುಬ್ಬ ನಕ್ಷತ್ರ, ಇಂದು ಸೋಮವಾರ. ಶ್ರಾವಣದ ಚತುರ್ಥಿಯನ್ನು 2 ಆರಾಧನೆಗಳಿಗೆ ವಿನಿಯೋಗಿಸಲಾಗುತ್ತದೆ. ಇಂದು ನಾಗರ ಚೌತಿ ಹಾಗೂ ದೂರ್ವಾ ಗಣಪತಿ ವ್ರತವಿದೆ. ಇಂದು ಉಪವಾಸವಿದ್ದು, ನಾಗಾರಾಧನೆ ಮಾಡುವ ಕ್ರಮವಿದೆ. ಗಣಪತಿ ಸನ್ನಿಧಾನಕ್ಕೆ ಯಥಾ ಶಕ್ತಿ, ಯಥಾ ಭಕ್ತಿ ಸಮರ್ಪಿಸಬೇಕು.