Aug 5, 2022, 8:28 AM IST
ಇಂದು ನಾಡಿನಾದ್ಯಂತ ವರಮಹಾಲಕ್ಷ್ಮೀ ಹಬ್ಬದ ಸಡಗರ, ಸಂಭ್ರಮ. ಲಕ್ಷ್ಮೀ ಬರೀ ಹಣವಲ್ಲ, ಸಂಪತ್ತಿನ ದೇವತೆಯಲ್ಲ ಆರೋಗ್ಯ, ನೆಮ್ಮದಿ, ಸಮಾಧಾನ ಇವೆಲ್ಲದಕ್ಕೂ ಆಕೆ ದೇವತೆ. ಜಗನ್ಮಾತೆ ಎನಿಸಿಕೊಂಡಿದ್ದಾಳೆ.
ಓಂ ಶ್ರೀ ಮಹಾಲಕ್ಷ್ಮೈಚ ವಿದ್ಮಹೇ, ವಿಷ್ಣು ಪತ್ನೈಚ ಧೀಮಹಿ, ತನ್ನೋ ಲಕ್ಷ್ಮೀ ಪ್ರಚೋದಯಾತ್ ಎಂದು ಆಕೆಯನ್ನು ಪೂಜಿಸಲಾಗುತ್ತದೆ. ತಮ್ಮೆಲ್ಲರ ಮನೆಗಳಲ್ಲಿ ಆರೋಗ್ಯ, ಸಂಪತ್ತು, ಸಮೃದ್ಧಿ, ಐಶ್ವರ್ಯಾ ತುಂಬಿರಲಿ, ತಾಯಿ ಮಹಾಲಕ್ಷ್ಮೀ ಸದಾ ನೆಲೆಸಿರಲಿ, ಬೇಡಿದ ವರವನ್ನು ಕರುಣಿಸಲಿ, ಎಲ್ಲರಿಗೂ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು