Feb 5, 2022, 12:53 PM IST
ವಿಜಯಪುರ(ಫೆ.05): 5 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸಿಂಥೆಟಿಕ್ ಟ್ರ್ಯಾಕ್ (Synthetic Track) ಇದೀಗ ಅಧೋಗತಿಗೆ ತಲುಪಿದೆ. ಸ್ವತಃ ಕ್ರೀಡಾ ಸಚಿವರೇ ಉದ್ಘಾಟಿಸಿದ್ದ ಸಿಂಥೆಟಿಕ್ ಟ್ರ್ಯಾಕ್ ಕಳಪೆ ಕಾಮಗಾರಿಯು ಕ್ರೀಡಾ ಇಲಾಖೆಯ ಕರ್ಮಕಾಂಡಕ್ಕೆ ಹಿಡಿದ ಕೈಗನ್ನಡಿ ಎನ್ನುವಂತಾಗಿದೆ.
ಸುವರ್ಣ ನ್ಯೂಸ್‌ನ BIG3 ವರದಿಯ ಫಲಶೃತಿಯಿಂದಾಗಿ ವಿಜಯಪುರದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣವಾಗಿತ್ತು. ಅಥ್ಲೀಟ್‌ಗಳ ಕನಸಿಕ ಸಿಂಥೆಟಿಕ್ ಟ್ರ್ಯಾಕ್ ಗಬ್ಬೆದ್ದು ಹೋಗಿದೆ. ಕ್ರೀಡಾ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಯೋಜನೆ ಹಳ್ಳ ಹಿಡಿದಿದೆ. ಕಳೆದ ವರ್ಷವಷ್ಟೇ ವಿಜಯಪುರದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣವಾಗಿತ್ತು.
Ranji Trophy:ದೇಶಿ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿಗೆ ಡೇಟ್ ಫಿಕ್ಸ್..!
ಸಿಂಥೆಟಿಕ್ ಟ್ರ್ತಾಕ್ ಪ್ರವೇಶಕ್ಕೆ ಪ್ರತಿಯೊಬ್ಬರಿಂದ ತಲಾ 300 ರುಪಾಯಿಗಳನ್ನು ಪಡೆಯಲಾಗುತ್ತಿದೆ. ಈ ರೀತಿ ಸಂಗ್ರಹವಾದ ಹಣ ಅಧಿಕಾರಿಗಳ ಖಜಾನೆ ಸೇರುತ್ತಿದೆಯಾ ಎನ್ನುವ ಅನುಮಾನ ಕಾಡಲಾರಂಭಿಸಿದೆ. ಕ್ರೀಡಾ ಇಲಾಖೆ ಈ ಬಗ್ಗೆ ಇನ್ನಾದರೂ ಎಚ್ಚೆತ್ತುಕೊಂಡು ಅವ್ಯವಸ್ಥೆಯನ್ನು ಸರಿಪಡಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.