Mar 4, 2019, 8:16 PM IST
ಮೇಲ್ನೋಟಕ್ಕೆ ಪಕ್ಷದೊಂದಿಗೆ ಅಸಮಾಧಾನದ ಕಾರಣದಿಂದ ಚಿಂಚೊಳಿ ಶಾಸಕ ಉಮೇಶ್ ಜಾಧವ್ ರಾಜೀನಾಮೆ ನೀಡಿದ್ದಾರೆ. ಆದರೆ ಇದು ಅಷ್ಟಕ್ಕೆ ಮಾತ್ರ ಸೀಮಿತವೇ? ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಪುತ್ರ ವ್ಯಾಮೋಹ, ಅವರ ಆಪ್ತರನ್ನು ದೂರವಾಗಿಸಿತೇ? ಬಾಬುರಾವ್ ಚಿಂಚನಸೂರು ಈಗಾಗಲೇ ಬಿಜೆಪಿ ತೆಕ್ಕೆಗೆ ಸೇರಿದ್ದಾರೆ. ಈಗ ಉಮೇಶ್ ಜಾಧವ್ ಕೂಡಾ ಅದೇ ದಾರಿಯನ್ನು ನೆಚ್ಚಿಕೊಂಡಿದ್ದಾರೆ. ಖರ್ಗೆ ಏಕಾಂಗಿಯಾಗಿದ್ದಾರೆ. ಬಿಜೆಪಿ ತೋಡಿದ ಖೆಡ್ಡಾಕ್ಕೆ ಖರ್ಗೆ ಬೀಳ್ತಾರಾ?