Jan 8, 2025, 1:43 PM IST
ಅವನು ಟ್ರಕ್ ಡ್ರೈವರ್. ಒಮ್ಮೆ ಮನೆ ಬಿಟ್ರೆ ವಾಪಸ್ ಆಗೋಕೆ ದಿನಗಳೆ ಬಾಕಾಗ್ತಿತ್ತು. ಇನ್ನೂ ಆತನ ಹೆಂಡತಿ ಇದ್ದ ಇಬ್ಬರು ಮಕ್ಕಳನ್ನು ನೋಡಿಕೊಂಡು ಮನೆಯಲ್ಲೇ ಇರುತ್ತಿದ್ದಳು. ಆದ್ರೆ ಆವತ್ತು ಬಾಡಿಗೆ ಇದೆ ಅಂತ ತನ್ನ ಟ್ರಕ್ ತೆಗೆದುಕೊಂಡು ಹೋದ. ಆದರೆ ದಾರಿ ಮಧ್ಯದಲ್ಲೇ ಅವನಿಗೆ ಫೋನ್ ಕಾಲ್ ಬಂದಿತ್ತು. ನಿನ್ನ ಹೆಂಡತಿ ಮಕ್ಕಳು ಕಾಣುತ್ತಿಲ್ಲ ಅಂತ. ಕೆಲಸದ ಮೇಲಿದ್ದ ಗಂಡ ಓಡೋಡಿ ಬಂದ. ಎಲ್ಲಿ ಹುಡುಕಿದ್ರೂ ಅವಳ ಸುಳಿವಿಲ್ಲ. ವಿಧಿ ಇಲ್ಲದೆ ಪೊಲೀಸ್ ಠಾಣೆಗೆ ಹೋಗಿ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಿಸಿದ.
ಆದ್ರೆ ಕಂಪ್ಲೆಂಟ್ ಕೊಟ್ಟು ಹೊರ ಬರುವಾಗ್ಲೇ ಮತ್ತೊಬ್ಬ ಮಹಿಳೆ ನನ್ನ ಗಂಡ ಕಾಣುತ್ತಿಲ್ಲ ಅಂತ ದೂರು ದಾಖಲಿಸೋದಕ್ಕೆ ಬಂದಿದ್ಲು. ಹಾಗಾದ್ರೆ ಅವನ ಹೆಂಡತಿ. ಈಕೆಯ ಗಂಡನ ಜೊತೆ ಓಡಿ ಹೋದಳಾ? ಅಥವಾ ಅಲ್ಲಿ ಕಿಡ್ನ್ಯಾಪ್ ಆಗಿದ್ಯಾ? ಒಂದು ಅಂಕಲ್ ಆಂಟಿ ಲವ್ ಸ್ಟೋರಿಯೇ ಇವತ್ತಿನ ಎಫ್.ಐ.ಆರ್