Jul 31, 2023, 5:31 PM IST
ಎಲ್ಲರೂ ಆ ಜಟಿಲ ಸಮಸ್ಯೆಗಳನ್ನ ಬಗೆ ಹರಿಸೋಕೆ ಆಗಲ್ಲ ಎಂದುಕೊಂಡಿದ್ದರು. ಅವರ ಕೈಯಲ್ಲಿಯೇ ಆಗಿಲ್ಲ ಏಷ್ಯಾನೆಟ್ ಸುವರ್ಣ ನ್ಯೂಸ್ ಚಾನಲ್‌ನ ಬಿಗ್-3 ಇಂದ ಆಗುತ್ತಾ ಎಂದು ಮಾತನಾಡುತ್ತಿದ್ದರು. ಯಾವಾಗ, ಬಿಗ್-3 ವೇದಿಕೆಗೆ ಹಲವು ಈ ಸಮಸ್ಯೆಗಳು ಬಂದವೋ ಆಗ ಮಿರಾಕಲ್ ರೀತಿ ಎಲ್ಲ ಸಮಸ್ಯೆಗಳು ಪರಿಹಾರ ಆಗಿದ್ದಾವೆ ಗೊತ್ತಾ.? ಅಂಥಹ ಕೆಲವೊಂದು ಇಂಪ್ಯಾಕ್ಟ್ ಸ್ಟೋರಿಗಳು ಇಲ್ಲಿವೆ ನೋಡಿ..
ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಇಡೀ ರಾಜ್ಯದ ಮನೆ ಮಾತಾದ ಬಿಗ್-3 ಕಾರ್ಯಕ್ರಮ ಮತ್ತೊಮ್ಮೆ ಶುರು ಆಗ್ತಿದೆ. ಈಗಾಗಲೇ ರಾಜ್ಯದ ಜನರಿಂದ ಮಗದೊಮ್ಮೆ ಈ ಕಾರ್ಯಕ್ರಮವನ್ನ ಬೇಗ ಶುರು ಮಾಡಿ ಅಂತ ಜನರಿಂದ ಡಿಮ್ಯಾಂಡ್ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ನಮ್ಮ ಕಚೇರಿಗೆ ಕರೆಗಳನ್ನ ಮಾಡಿ ಬಿಗ್3 ಶುರು ಮಾಡಿ.. ಶುರು ಮಾಡಿ ಅಂತಿದ್ದಾರೆ. ಇದೀಗ ಹೊಸ ಸರ್ಕಾರ ರಚನೆ ಆಗಿದೆ, ಗೆಲ್ಲಿಸಿದ ಜನರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕಿದೆ. ಅದಕ್ಕೂ ಮುಂಚೆ ಕಳೆದ ಸೀಸಜ್ನಲ್ಲಿ ಬಿಗ್3 ಯಾವೆಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದೆ ಅನ್ನೋದರ ಒಂದು ಝಲಕ್..
ಬದಲಾಯ್ತು ಪಾಪೇನಹಳ್ಳಿ ಸರ್ಕಾರಿ ಶಾಲೆ: ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲೂಕಿನ ಪಾಪೇನಹಳ್ಳಿ ಗ್ರಾಮದಲ್ಲಿ ಸರಿಯಾದ ಶಾಲೆ ಇಲ್ಲದೆ, ಗ್ರಾಮದ ಮಕ್ಕಳೆಲ್ಲ ಮರದ ಕೆಳಗೆ ಪಾಠ ಕಲಿಯೋ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೊಸ ಶಾಲಾ ಕಟ್ಟಡ ಅರ್ದಕ್ಕೆ ನಿಂತು ಹೋಗಿತ್ತು. ಈ ಬಗ್ಗೆ ಗ್ರಾಮಸ್ಥರು ಬೇಸತ್ತು ಸುವರ್ಣ ನ್ಯೂಸ್ ಬಿಗ್-3 ಗಮನಕ್ಕೆ ತಂದರು. ಬಿಗ-3 ಲೈವ್‌ನಲ್ಲಿಯೇ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳನ್ನ ಸರಿಯಾಗೆ ಕ್ಲಾಸ್ ತಗೊಂಡಿದ್ವಿ. ಹೆಂಗ್ ಫಟಾಫಟ್ ರೆಡಿ ಆಯ್ತು ನೋಡಿ..
ಗುರುಮಠಕಲ್ ಬಡ ಕುಟುಂಬಕ್ಕೆ ಸೈಟ್ ಹಂಚಿಕೆ: ಯಾದಗಿರಿ ಜಿಲ್ಲೆ ಗುರುಮಠಕಲ್ ಪಟ್ಟಣದಲ್ಲಿ 30 ವರ್ಷಗಳಿಂದ ಸೂರಿಲ್ಲದೆ 130 ಹೆಚ್ಚು ಕುಟುಂಬಗಳು ಬೀದಿಯಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿತ್ತು. ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಿ ನೀವೆಶನ ಹಂಚಿಕೆ ಮಾಡದೆ 30 ವರ್ಷದಿಂದ ನಿತ್ಯ ಅಲೆದಾಡುಸುತ್ತಿದ್ದರು. ಬಿಗ್-3 ಯಲ್ಲಿ ಸಂತ್ರಸ್ತ ಫಲಾನುಭವಿಗಳ ಪರವಾಗಿ ಧ್ವನಿ ಎತ್ತಿ ಎಲ್ಲರಿಗೂ ನಿವೇಶನ ಕೊಡಿಸಿ ಬಡವರ ಕಣ್ಣೊರೆಸುವ ಕೆಲಸ ಮಾಡಲಾಗಿದೆ.