Feb 25, 2021, 2:29 PM IST
ಶಿವಮೊಗ್ಗ (ಫೆ.25): ಹೊಸನಗರ ತಾಲೂಕಿನ ಚಿಕ್ಕಜೇನಿ ಗ್ರಾಪಂ ವ್ಯಾಪ್ತಿಯ ಮುತ್ತಲ ಗ್ರಾಮಕ್ಕೆ ರಂಗಕರ್ಮಿ , ನಟ ನೀನಾಸಂ ಸತೀಶ್ ಭೇಟಿ ನೀಡಿದ್ದು, ಸರ್ಕಾರದ ನೆರವಿಗೆ ಕಾಯದೇ ಗ್ರಾಮದಲ್ಲಿ ಗ್ರಾಮಸ್ಥರಿಂದಲೇ ನಡೆಯುತ್ತಿರುವ ಅಭಿವೃದ್ಧಿ ಕಾರ್ಯ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೋಟೆಲ್‌ಗೆ ತೆರಳಿ ಸ್ಪೆಷಲ್ ಟೀ ತಯಾರಿಸಿದ ನಟ ಸತೀಶ್ ನೀನಾಸಂ ವಿಡಿಯೋ ವೈರಲ್! .
ಸ್ಥಳೀಯ ಸಾರಾ ಸಂಸ್ಥೆ ನೇತೃತ್ವದಲ್ಲಿ ಗ್ರಾಮಸ್ಥರು ಕೈಗೊಂಡ ಕೆರೆಗಳ ಪುನಃಚೇತನ ಕಾರ್ಯ ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಗ್ರಾಮಗಳ ಜನತೆ ಒಗ್ಗಟಿನ ಮಂತ್ರ ಜಪಿಸುವ ಮೂಲಕ ಪರಿಸರ ಕಾಳಜಿಗೆ ಹೆಚ್ಚಿನ ಮಹತ್ವ ನೀಡಬೇಕು. ಸ್ಥಳೀಯ ಜನತೆ ತಮಗೆ ಅಗತ್ಯ ಇರುವ ಕೆಲಸಗಳಿಗೆ ತಾವೇ ಕೈಜೋಡಿಸಿ ಆರ್ಥಿಕ ಸಾಮಾಜಿಕ, ಶೈಕ್ಷಣಿಕ ಪ್ರಗತಿಗೆ ಸಹಕರಿಸ ಬೇಕಿದೆ ಎಂದು ಈ ವೇಳೆ ನಿನಾಸಂ ಸತೀಶ್ ಹೇಳಿದರು.