Nov 20, 2020, 4:18 PM IST
ವಿಶಾಲವಾದ ಕೋಣೆಗಳು, ಅತ್ಯಾಕರ್ಷಕ ಫಿನಿಶಿಂಗ್..ಕಂಪ್ಲೀಟ್ ಸೆಟ್ ಆಗಿ ನೊಡೋಕೆ ಸಖತ್ ಆಗಿ ಕಾಣ್ತೀರುವ ಈ ಮನೆ ಪಕ್ಕಾ ಪ್ಲಾಸ್ಟಿಕ್ ಮನೆ..ಮಂಗಳೂರಿನ ಪಚ್ಚನಾಡಿಯಲ್ಲಿ ನಿರ್ಮಾಣ ಆಗಿರುವ ಈ ಮನೆ ಈಗ ಹೊಸ ಯೋಚನೆಗೆ ಅಡಿಪಾಯ ಹಾಕಿದೆ..ಮಂಗಳೂರಿನ ಪ್ಲಾಸ್ಟಿಕ್ ಫಾರ್ ಚೇಂಜ್ ಇಂಡಿಯಾ ಫೌಂಡೇಶನ್ ಎಂಬ ಸಂಸ್ಥೆ ಈ ಪ್ಲಾಸ್ಟಿಕ್ ಮನೆಯನ್ನು ನಿರ್ಮಿಸಿದೆ. ನಾವು ಬಳಸಿ ಎಸೆಯುವ ಚಿಪ್ಸ್ ಪ್ಯಾಕೆಟ್,ಪಾನ್ ಪರಾಗ್ ಪ್ಯಾಕೆಟ್,ಚಾಕಲೇಟ್ ÃÝÂಪರ್ಸ್ ಸೇರಿದಂತೆ ಎಲ್ಲಾ ಪ್ಲಾಸ್ಟಿಕ್ ಗಳನ್ನು ಬಳಸಿ ಈ ಮನೆ ನಿರ್ಮಿಸಲಾಗಿದೆ. ಈ ಮನೆ ಕಟ್ಟೋಕೆ ಕÆáÉ,ಮರಳು,ಸಿಮೆಂಟ್, ಪೈಂಟ್ ಯಾವುದೂ ಆಗತ್ಯ ಇಲ್ಲ..ಚಿಂದಿ ಆಯುವವರೂ ÖæQRದ ಪ್ಲಾಸ್ಟಿಕ್ ಗಳೇ ಸಾಕು. ಎಲ್ಲಾ ಪ್ಲಾಸ್ಟಿಕ್ ವಸ್ತುಗಳನ್ನು ರಿಸೈಕಲ್ ಮಾಡಿ ಮನೆ ನಿರ್ಮಿಸಲಾಗಿದೆ. ಹೈದರಾಬಾದ್ ನ ಸಂಸ್ಥೆಯ ಸಹಯೋಗದೊಂದಿಗೆ ಮಂಗಳೂರಿನಲ್ಲಿ ಪ್ಲಾಸ್ಟಿಕ್ ಮನೆ ನಿರ್ಮಿಸಲಾಗಿದೆ. ಗುಜರಾತ್ ನಲ್ಲಿ ಈ ಪ್ಲಾಸ್ಟಿಕ್ ಗಳ ರಿಸೈಕಲ್ ಮಾಡಿ ಕರಗಿಸಿ ಪ್ಲಾಸ್ಟಿಕ್ ಪ್ಯಾನೆಲ್ ನಿರ್ಮಿಸಲಾಗಿದೆ. ವಾಸನೆ ಇಲ್ಲದಂತೆ ಮಾಡಲು ಕೆಮಿಕಲ್ ಕೂಡಾ ಬಳಸಲಾಗಿದೆ. ಪ್ಲಾಸ್ಟಿಕ್ ಪ್ಯಾನೆಲ್ ಗೆ ಎಲ್ಲಾ ರೀತಿಯ ವಾತವರಣ ಹೊಂದಿಕೊಳ್ಳುವಂತೆ, ಬೆಂಕಿಯಿಂದ ರಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.. ಮಂಗಳೂರಿನ ಮನೆ ಸುಮಾರು 4.5 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಇಂತಹ ಮನೆ ನಿರ್ಮಾಣಕ್ಕೆ ಕೇವಲ 15 ದಿನ ಸಾಕಾಗುತ್ತದೆ. ಪಚ್ಚನಾಡಿಯಲ್ಲಿ ಜೋಪಡಿಯಲ್ಲಿ ಒಂಟಿ ಮಹಿಳೆಗೆ ಮಂಗಳೂರಿನ ಪ್ಲಾಸ್ಟಿಕ್ ಫಾರ್ ಚೇಂಜ್ ಇಂಡಿಯಾ ಫೌಂಡೇಶನ್ ಪ್ಲಾಸ್ಟಿಕ್ ಮನೆ ನಿರ್ಮಿಸಿ ಕೊಟ್ಟಿದೆ. ಮನೆ ಇಲ್ಲದವರು,ಜೋಪಡಿಯಲ್ಲಿ ವಾಸಿಸುವವರಿಗೆ ಕಡಿಮೆ ವೆಚ್ಚದಲ್ಲಿ ಪ್ಲಾಸ್ಟಿಕ್ ಮನೆ ನಿರ್ಮಿಸಿ ಕೊಡುವ ಯೋಚನೆ ಸಂಸ್ಥೆಯಲ್ಲಿದೆ.
ಮಂಗಳೂರಿನ ಪ್ಲಾಸ್ಟಿಕ್ ಮನೆ ನಿರ್ಮಾಣ ಆದ ಬಳಿಕ ಸಂಸ್ಥೆಗೆ ಬೇಡಿಕೆ ಕೂಡಾ ಹೆಚ್ಚಾಗಿದೆ. ವಿವಿಧ ಸಂಘ ಸಂಸ್ಥೆಗಳು, ಬಸ್ ಸ್ಟ್ಯಾಂಡ್, ಶೌಚಾಲಯ,ಸಣ್ಣ ಕಾಟೇಜ್ ಗಳನ್ನು ಪ್ಲಾಸ್ಟಿಕ್ ನಿಂದ ನಿರ್ಮಿಸಿ ಕೊಡಿ ಅಂತಾ ಬೇಡಿಕೆ ಇಟ್ಟಿದೆ.ಟ್ರಾಫಿಕ್ ಪೊಲೀಸರಿಗೆ ನಿಲ್ಲುವ ಸ್ಟ್ಯಾಂಡ್ ನ್ನೂ ನಿರ್ಮಿಸಿ ಕೊಡುವಂತೆ ಸಂಸ್ಥೆಗೆ ಮನವಿ ಬಂದಿದೆ. ಪ್ಲಾಸ್ಟಿಕ್ ನಿರ್ವಹಣೆಗೆ ಹೊಸ ಹೊಸ ಅವಿಷ್ಕಾರಗಳು ಬಂದ್ರೂ ಉಪಯೋಗ ಆಗದೇ ಇದ್ದಾಗ,ಕಸ ದಿಂದ ರಸ ತೆಗೆಯುವ ಯೋಜನೆಗೆ ಸಂಸ್ಥೆ ಇಳಿದಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸ್ವಂತ ಮನೆ ನಿರ್ಮಿಸಲು ಶಕ್ತರಲ್ಲದವರಿಗೆ ಅಚ್ಚುಕಟ್ಟಾಗಿ ನಿರ್ಮಾಣವಾಗುವ ಪ್ಲಾಸ್ಟಿಕ್ ಮನೆ ,ಹೊಸ ಮನೆಯ ಆಸೆಯನ್ನು ಜೀವಂತವಾಗಿರಿಸಿದೆ.