Apr 3, 2023, 11:27 AM IST
ಭಾರಿ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗಿದ್ದು, ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ರಾಜಕೀಯ ವಲಯದಲ್ಲೂ ರಂಗೇರಿದೆ. ಯಾರು ಗೆಲ್ತಾರೆ, ಯಾರು ಸೋಲ್ತಾರೆ ಎನ್ನುವ ಲೆಕ್ಕಾಚಾರಗಳ ನಡುವೆ ಭವಿಷ್ಯಗಳು ರಾಜಕಾರಣಿಗಳನ್ನ ಬೆಚ್ಚಿ ಬೀಳಿಸ್ತಿವೆ. ಅದರಲ್ಲೂ ನಡುರಾತ್ರಿ ಸಮಯದಲ್ಲಿ ಕೆಂಪು ಮುಖವಾಡ ಧರಿಸಿ ನುಡಿಯಲಾಗಿರುವ ಅದೊಂದು ಭವಿಷ್ಯ ರಾಜಕೀಯ ವಲಯದಲ್ಲಿ ಸುಂಟರಗಾಳಿ ಎಬ್ಬಿಸಿದೆ. ಭವಿಷ್ಯ ಕೇಳಿದ ರಾಜಕಾರಣಿಗಳು ದಂಗಾಗಿದ್ದಾರೆ.ವಿಜಯಪುರ ಜಿಲ್ಲೆಯ ಮಖನಾಪುರ ಗ್ರಾಮದಲ್ಲಿ ಸ್ವತಃ ಪರಮಾತ್ಮ ಶಿವನೇ ಬಂದು ಇಲ್ಲಿ ಭವಿಷ್ಯ ನುಡಿದಿದ್ದಾನೆ. ಯುಗಾದಿಯ ಅಮವಾಸ್ಯೆಯ ನಡುರಾತ್ರಿ 1 ರಿಂದ 3 ಗಂಟೆಯ ಒಳಗೆ ನುಡಿಯುವ ಫವರ್‌ಪುಲ್ ಭವಿಷ್ಯ ಇದಾಗಿದ್ದು, ಈ ಸಮಯದಲ್ಲಿ ಭವಿಷ್ಯ ನುಡಿಯುವ ಕೆಂಪು ಮುಖವಾಡ ತೊಟ್ಟವರು, ಮೊದಲು ಡೊಳ್ಳು, ಮೇಳದ ಸದ್ದಿಗೆ ಕುಣಿಯುತ್ತಾರೆ. ಅದು ಎಲ್ಲಿಯವರೆಗೆ ಎಂದರೆ ಮಯ್ಯಲ್ಲಿ ಸಾಕ್ಷಾತ್ ಶಿವ ಬಂದು ಸೇರುವವರೆಗು, ಈ ಭಾಗದಲ್ಲಿ ಇದನ್ನ ದೇವರು ಮೈ ತುಂಬೋದು ಅಂತಾ ಕರೆಯುತ್ತಾರೆ. ಹೀಗೆ ಡೊಳ್ಳಿನ ಸದ್ದಿನ ಮಧ್ಯೆ ದೇವರು ಬಂದು ಮೈ ತುಂಬಿದಾಗ, ಕೆಂಪು ಮುಖವಾಡ ತೊಟ್ಟ ಭವಿಷ್ಯಗಾರರು ಡೊಳ್ಳಿನ ಮೇಲೆ ಎದ್ದು ನಿಂತು ಭವಿಷ್ಯ ನುಡಿಯೋಕೆ ಆರಂಭಿಸ್ತಾರೆ. ಮಳೆ-ಬೆಳೆ, ಅನಾಹುತಗಳು ಸೇರಿದಂತೆ ರಾಜಕಾರಣ ಭವಿಷ್ಯವನ್ನು ನುಡಿಯುತ್ತಾರೆ. ಅದ್ರಲ್ಲು ಚುನಾವಣೆ ಸಂದರ್ಭದಲ್ಲಿಯೇ ಇಲ್ಲಿ ನುಡಿದ ಭವಿಷ್ಯ ರಾಜಕಾರಣಿಗಳನ್ನ ದಿಗ್ಭ್ರಮೆ ಗೊಳಿಸಿದೆ.