Apr 11, 2023, 12:32 PM IST
ನ್ಯೂಸ್ ಅವರ್ ಸ್ಪೆಶಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹತ್ತು ಹಲವಾರು ವಿಚಾರಗಳ ಬಗ್ಗೆ ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಬಾರಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಬರ ಬೇಕು . ಏಕೆಂದರೆ ಬಿಜೆಪಿ ಪಕ್ಷ ಮಾಡಿರುವಂತ ತಪ್ಪುಗಳು ,ಬಿಜೆಪಿ ಕೊಟ್ಟಿರುವಂತಹ ಆಶ್ವಾಸನೆಗಳನ್ನು ಸ್ವಲ್ಪನೂ ಜಾರಿಗೆ ತಂದಿಲ್ಲ ಎಂದಿದ್ದಾರೆ. ಅದೇ ಕಾಂಗ್ರೆಸ್ ಪಕ್ಷ 155 ಆಶ್ವಾಸನೆಗಳನ್ನು 2013 ರಲ್ಲಿ ಕೊಟ್ಟು ಅಷ್ಟುನು ಜಾರಿಗೆ ತಂದಿದ್ದವಿ. ಅದಲ್ಲದೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬೆಲೆ ಏರಿಕೆ , ಭ್ರಷ್ಟಾಚಾರ ಆಡಳಿತವನ್ನು ನಡೆಸುತ್ತಿರುವ ಒಂದು ವೈಕರಿಯಿಂದ ಜನಕ್ಕೆ ಸಹಜವಾಗಿ ಬೇಸರವಾಗಿದೆ. ಬಿಜೆಪಿಯನ್ನು ಜನ ಈ ಭಾರಿ ಬೆಂಬಲಿಸಲ್ಲ , ಕೇಸರಿ ಪಾಳ್ಯದ ನಾಯಕತ್ವದಲ್ಲಿ ಕೊರತೆ ಇದೆ ಹೀಗಾಗಿ ಮತದಾರರು ಕಾಂಗ್ರೆಸ್‌ಗೆ ಒಲಸೆ ಬರುತ್ತಾರೆ ಎಂದು ತಿಳಿಸಿದರು . ಇನ್ನು ಕಾಂಗ್ರೆಸ್ ನಲ್ಲಿ ಒಂದೇ ಬಣ ಆದರೆ ನಾಯಕರು ಜಾಸ್ತಿ ಇದ್ದಾರೆ ಖರ್ಗೆಗೆ ಬಣದ ಅವಶ್ಯಕತೆ ಇಲ್ಲ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ