Nov 9, 2020, 4:13 PM IST
ಚೀನಾದ ಉತ್ನನ್ನಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಗೋವಿನ ಸಗಣಿಯಿಂದ ತಯಾರಿಸಲ್ಪಡುವ ಪರಿಸರಸ್ನೇಹಿ ದೀಪಗಳ ಮಾರಾಟಕ್ಕೆ ಗೋವನ್ನತಿ ಗೋಶಾಲೆ & ಪುಣ್ಯಕೋಟಿ ನ್ಯಾಚುರಲ್ಸ್ ಸಂಸ್ಥೆ ಸಜ್ಜಾಗಿದೆ. ಮನೆ-ಮನೆಯ ಬಾಗಿಲಲ್ಲೂ ದೀಪ ಬೆಳಗುವ ಹಬ್ಬವಾದ ದೀಪಾವಳಿಗೆ ಪರಸರಸ್ನೇಹಿ ದೀಪಗಳನ್ನು ಉತ್ಪಾದಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಸಂಸ್ಥೆಯ ಸಹಸಂಸ್ಥಾಪಕ ಚಂದ್ರಶೇಖರ್ ತಿಳಿಸಿದ್ದಾರೆ. ಅಲ್ಲದೆ ಮುಂಬರುವ ಹಬ್ಬ ಹರಿದಿನಗಳಲ್ಲಿ ಹಸುವಿನ ಸಗಣಿಯಿಂದ ತಯಾರಿಸಲ್ಪಡುವ ದೇಶೀಯ ಉತ್ಪನ್ನಗಳನ್ನೇ ಖರೀದಿಸುವಂತೆ ಉತ್ತೇಜಿಸಲು ಮನವಿ ಮಾಡಿದ್ದಾರೆ.