ಜ್ವರ, ಕೆಮ್ಮು ಮಾತ್ರವಲ್ಲ... ಇಲ್ಲಿದೆ ಕೊರೋನಾದ ಹೊಸ 6 ಲಕ್ಷಣಗಳು!

Apr 28, 2020, 2:12 PM IST

ಬೆಂಗಳೂರು(ಏ. 28): ಸಾಮಾನ್ಯವಾಗಿ ಕೊರೋನಾ ಸೋಮಕಿತರಲ್ಲಿ ಜ್ವರ, ಕರಮ್ಮು ನೆಗಡಿ ಮೊದಲಾದ ಲಕ್ಷಣಗಳು ಕಂಡು ಬರುತ್ತವೆ. ಆದರೀಗ ಈ ಪಟ್ಟಿಗೆ ಹೊಸ ಆರು ಲಕ್ಷಣಗಳು ಸೇರ್ಪಡೆಯಾಗಿವೆ.

ಸೈಲೆಂಟ್ ಅಟ್ಯಾಕ್: ಈ ರಾಜ್ಯದ ಶೇ. 80ರಷ್ಟು ಸೋಂಕಿತರಲ್ಲಿ ಲಕ್ಷಣಗಳೇ ಇಲ್ಲ!

ಹೌದು ಅಮೆರಿಕದ ಆರೋಗ್ಯ ತಜ್ಞರು ಈ ಮಾಹಿತಿಯನ್ನು ಖಚಿತಪಡಿಸಿದ್ದು, ವಾಸನೆ ತಿಳಿಯದಿರುವುದು, ರುಚಿ ಗೊತ್ತಾಗದಿರುವುದು ಸೇರಿದಂತೆ ಒಟ್ಟು ಆರು ಹೊಸ ರೋಗ ಲಕ್ಷಣಗಳನ್ನು ಪತ್ತೆ ಮಾಡಿದ್ದಾರೆ.

"

ಈ ಪಟ್ಟಿಯನ್ವಯ ಚಳಿ, ಮೈ ನಡುಕ, ಗಂಟಲು ನೋವು, ಮೈ ಕೈ ನೋವು, ಜ್ವರ, ಕೆಮ್ಮು ಕೆಲವೊಮ್ಮೆ ನೆಗಡಿ ಸೇರಿ ಇನ್ನೂ ಕೆಲ ಲಕ್ಷಣಗಳನ್ನು ಪಟ್ಟಿ ಮಾಡಲಾಗಿದೆ