ಸಾಹಸ ಪ್ರದರ್ಶಿಸಲು ಹೋಗಿ ಬೆನ್ನು ಮೂಳೆ ಮುರಿದುಕೊಂಡ ಯುವಕ!

Jun 18, 2019, 2:18 PM IST

ತುಮಕೂರು[ಜೂ.18]: ಸಾಹಸಮಯ ವಿಡಿಯೋ ಪ್ರದರ್ಶಿಸಬೇಕೆಂಬ ಗೀಳಿಗೆ ಬಿದ್ದ ಯುವಕನೊಬ್ಬ ಬೆನ್ನು ಮೂಳೆ ಮುರಿದುಕೊಂಡು ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದಾನೆ. ಹಾಸಿಗೆ ಹಿಡಿದ ತುಮಕೂರಿನ ಗೋಡೆಕೆರೆ ನಿವಾಸಿ ಕುಮಾರ್ ನೆಲಕ್ಕೆ ಬಿದ್ದಾಗ ಕತ್ತು, ಬೆನ್ನು ಮೂಳೆ ಮುರಿದುಕೊಂಡಿದ್ದಾನೆ. ಕಳೆದ ಶನಿವಾರ ಸಾಹಸ ಮಾಡುತ್ತಿದ್ದಾಗ ಈ ಘಟನೆ ನಡೆದಿದ್ದು, ಸದ್ಯ ಸಾಮಾಜಿಕ ಜಾಲತಾಣಗಲ್ಲಿ ವಿಡಯೋ ಭಾರೀ ವೈರಲ್ ಆಗಿದೆ.