ಗುಳೆ ಹೋಗೋದಕ್ಕೆ ಸೆಡ್ಡು ಹೊಡೆದ ದಿಟ್ಟ ಮಹಿಳೆ: ನೂರಾರು ಜನರಿಗೆ ಕೆಲಸ ನೀಡಿದ ಉದ್ಯೋಗದಾತೆ!

Mar 8, 2020, 7:59 PM IST

ರಾಯಚೂರು[ಮಾ.08]: ಪ್ರತಿ ವರ್ಷ ಉದ್ಯೋಗ ಅರಸಿ ಮಹಾನಗರಗಳತ್ತ ಜಿಲ್ಲೆಯ ಜನ ಗುಳೆ ಹೋಗುತ್ತಾರೆ. ಇದನ್ನ ತಪ್ಪಿಸಲೆಂದೇ ಚೆನ್ನಮ್ಮ ಎಂಬುವರು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ವಿವಿಧೋದ್ದೇಶ ಸಂಘ ಆರಂಭಿಸಿ ನೂರಾರು ಮಹಿಳೆಯರಿಗೆ ಕೆಲಸ ನೀಡಿದ್ದಾರೆ. ಹೌದು, ಜಿಲ್ಲೆಯ ದೇವದುರ್ಗ ತಾಲೂಕಿನ   ಜಾಲಹಳ್ಳಿ ಗ್ರಾಮದಲ್ಲಿ ಈ ಸಂಘ ಆರಂಭಿಸಿ 180-200 ಮಹಿಳೆಯರಿಗೆ ಉದ್ಯೋಗ ನೀಡಿದ್ದಾರೆ.

ಮೊದಲು ಕೇವಲ ರೇಷ್ಮೆ ಹಾರ ಮಾತ್ರ ತಯಾರು ಮಾಡುತ್ತಿದ್ರು. ಆದ್ರೆ ಈಗ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮುತ್ತಿನ ಹಾರ, ಏಲಕ್ಕಿ ಹಾರ, ರುದ್ರಾಕ್ಷಿ ಹಾರ, ರಥೋತ್ಸವ ಹಾರ ಸೇರಿದಂತೆ 100 ಬಗ್ಗೆಯ ಹಾರಗಳನ್ನು ತಯಾರು ಮಾಡುತ್ತಿದ್ದಾರೆ. ಇವರು ಮಾಡುವ ಹಾರವೂ ಮಾರುಕಟ್ಟೆಯಲ್ಲಿ 10 ರೂಪಾಯಿಯಿಂದ 10 ಸಾವಿರ ರೂಪಾಯಿವರೆಗಿನ ಹಾರಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ.