Dec 8, 2019, 7:25 PM IST
ಮಂಗಳೂರು(ಡಿ. 08) ಸರ್ಕಾರ ನನ್ನನ್ನು ಉಳ್ಳಾಲ ದರ್ಗಾಕ್ಕೆ ಆಡಳಿತಾಧಿಕಾರಿಯಾಗಿ ನೇಮಕ ಮಾಡಿದೆ. ಆದರೆ ಸರ್ಕಾರ ದರ್ಗಾವನ್ನು ವಶಪಡಿಸಿಕೊಳ್ಳಲಿದೆ ಎಂಬುದು ಸತ್ಯಕ್ಕೆ ದೂರವಾವಾದ ಮಾತು ಎಂದು ಮಂಗಳೂರಿನಲ್ಲಿ ಉಳ್ಳಾಲ ಸೈಯ್ಯದ್ ಮದನಿ ದರ್ಗಾದ ನೂತನ ಆಡಳಿತಾಧಿಕಾರಿ ಇಬ್ರಾಹಿಂ ಗೂನಡ್ಕ ತಿಳಿಸಿದ್ದಾರೆ.
ಸರ್ಕಾರ ಅನೇಕ ಕಡೆ ಮಸೀದಿಗಳಲ್ಲಿ ಆಡಳಿತಾಧಿಕಾರಿಗಳನ್ನು ತಾತ್ಕಾಲಿಕ ನೆಲೆಯಲ್ಲಿ ನೇಮಕ ಮಾಡಿದಂತೆಯೇ ಇದೀಗ ಉಳ್ಳಾಲ ದರ್ಗಾಕ್ಕೂ ನೇಮಕ ಮಾಡಿದೆ. ಆಡಳಿತಾಧಿಕಾರಿಯಾಗಿ ನಾನು ನ.25ರಿಂದಲೇ ಅಧಿಕಾರ ಸ್ವೀಕಾರ ಮಾಡಿದ್ದೇನೆ. ದರ್ಗಾದ ಹೊಸ ಆಡಳಿತ ಮಂಡಳಿ ರಚನೆ ಹೊಣೆ, ದರ್ಗಾದ ದೈನಂದಿನ ಆಡಳಿತ ಉಸ್ತುವಾರಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಸರ್ಕಾರ ನೀಡಿದೆ. ನನ್ನ ಅಧಿಕಾರ ಇರುವುದು ಕೇವಲ 6 ತಿಂಗಳು ಮಾತ್ರ ಎಂದು ತಿಳಿಸಿದರು.
ಯುವತಿ ರಕ್ಷಿಸಿದ ನರ್ಸ್ ಗೆ ಶೌರ್ಯ ಪ್ರಶಸ್ತಿ
ಡಿ.5ರಂದು ದರ್ಗಾಗೆ ಭೇಟಿ ನೀಡಿದಾಗ ನನ್ನ ಕರ್ತವ್ಯಕ್ಕೆ ಹಿಂದಿನ ಆಡಳಿತ ಮಂಡಳಿ ಅಡ್ಡಿ ಪಡಿಸಿದೆ. ಈ ದರ್ಗಾವು ರಾಜ್ಯ ವಕ್ಫ್ ಮಂಡಳಿ ಅಧೀನದಲ್ಲಿದ್ದು ಆರು ತಿಂಗಳ ಅವಧಿಗೆ ನನ್ನ ನೇಮಕವಾಗಿದೆ. ದರ್ಗಾ ಅಥವಾ ಮಸೀದಿಗಳಲ್ಲಿ ಗೊಂದಲಗಳಾದಾಗ ಆಡಳಿತಾಧಿಕಾರಿ ನೇಮಕ ಸರ್ವೇಸಾಮಾನ್ಯ, ಆದರೆ ಆದ್ರೆ ಕೆಲವರು ದರ್ಗಾವನ್ನು ಸರ್ಕಾರ ವಶಕ್ಕೆ ಪಡೆದಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.