Feb 4, 2021, 2:28 PM IST
ತುಮಕೂರು (ಫೆ. 04): ಹೆಬ್ಬೂರು ಹೋಬಳಿಯ ತೊಂಡಗೆರೆ ಗ್ರಾಮದಲ್ಲಿ ಕಳೆದ 20 ವರ್ಷಗಳಿಂದ ವಾಸವಾಗಿರುವ ದಲಿತ ಕುಟುಂಬವೊಂದು ಸ್ವಂತದ್ದೊಂದು ಸೂರು ಇಲ್ಲದೇ ಹರಕಲು ಗುಡಿಸಲಿನಲ್ಲಿ ವಾಸಿಸುತ್ತಿದ್ದರು. ಪುಟ್ಟ ಪುಟ್ಟ ಮಕ್ಕಳು, ಕುಟುಂಬದವರು ಭಯದಲ್ಲೇ ಬದುಕುವಂತಾಗಿತ್ತು. ಈ ಬಗ್ಗೆ ಬಿಗ್ 3 ವರದಿ ಪ್ರಸಾರ ಮಾಡಿದ ಬಳಿಕ ಎಚ್ಚೆತ್ತ ಶಾಸಕರು ಸೂರು ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ.
ಕಳೆದ 20 ವರ್ಷಗಳಿಂದ ಈ ಕುಟುಂಬಕ್ಕೆ ಸ್ವಂತ ಸೂರಿಲ್ಲ, ಹರಕಲು ಗುಡಿಸಲು, ದೀಪದಲ್ಲೇ ಬದುಕು!