Jan 23, 2022, 3:40 PM IST
ತುಮಕೂರು (ಜ. 23): ಜಾಹಿರಾತು ಫಲಕಗಳಿಗೆ (Flex) ಅಡ್ಡವಾಗಿದೆ ಎಂದು ಬೇವಿನ ಮರಗಳನ್ನು (Tree Cutting) ಕಡಿದು ಹಾಕಿದ್ದಾರೆ ಕಿಡಿಗೇಡಿಗಳು. ಇಲ್ಲಿನ ಬಿ ಎಚ್ ರಸ್ತೆಯಲ್ಲಿನ 10 ಕ್ಕೂ ಹೆಚ್ಚು ಬೇವಿನ ಮರಗಳನ್ನು ನೆಲಕ್ಕುರುಳಿಸಿದ್ದಾರೆ. ರಾತ್ರೋರಾತ್ರಿ ಮರಗಳನ್ನು ಕಡಿದು ಹಾಕಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.