ರಾಜ್ಯ ಹೆದ್ದಾರಿಯಲ್ಲಿ ಮಹಾರಾಷ್ಟ್ರ ಮೂಲದ ಮಂಗಳಮುಖಿಯರ ಹೈಡ್ರಾಮಾ!

Jun 15, 2019, 3:33 PM IST

ಬಾಗಲಕೋಟೆ[ಜೂ.15]: ಹೆದ್ದಾರಿ ಮಧ್ಯೆ ಮಹಾರಾಷ್ಟ್ರ ಮೂಲದ ಮಂಗಳಮುಖಿಯರ ಹೈಡ್ರಾಮಾದ ವಿಡಿಯೋ ಈಗ  ವೈರಲ್ ಆಗಿದೆ. 

ಬಾಗಲಕೋಟೆ ಜಮಖಂಡಿಯ ಮೂಧೋಳ ರಾಜ್ಯ  ಹೆದ್ದಾರಿಯಲ್ಲಿ RTO ಕಚೇರಿ ಬಳಿ, ವಾಹನ ಸಾರಿಗೆ ಇಲಾಖೆಯವರು ಮಂಗಳಮುಖಿಯರು ತೆರಳುತ್ತಿದ್ದ ವಾಹನ ವಶಕ್ಕೆ ಪಡೆದಿದ್ದರು. ಈ ವೇಳೆ ಮಂಗಳಮುಖಿಯರು ವಾಹನಕ್ಕೆ ಅಡ್ಡ ಮಲಗಿ, ಕೈಯಲ್ಲಿನ ಬಳೆ ಒಡೆದುಕೊಂಡು ಹೈಡ್ರಾಮಾ ಆರಂಭಿಸಿದ್ದಾರೆ. ಅಷ್ಟೇ ಅಲ್ಲದೇ ತಪಾಸಣೆಗಿಳಿದಿದ್ದ RTO ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ.

ಮಹಾರಾಷ್ಟ್ರದ ಕೊಲ್ಲಾಪುರದಿಂದ ಸವದತ್ತಿಗೆ ಮ್ಯಾಕ್ಸಿ ಕ್ಯಾಬ್ ನಲ್ಲಿ 7 ಜನರು ಪ್ರಯಾಣಿಸುವ ಬದಲು 12 ಜನ ತೆರಳುತ್ತಿದ್ದರು.  ಅದರೆ ಇದನ್ನು ಗಮನಿಸಿದ RTO ಅಧಿಕಾರಿಗಳು ಮ್ಯಾಕ್ಸ್ ಕ್ಯಾಬ್ ಪರಿಶೀಲಿಸಿ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಮಂಗಳಮುಖಿಯರು ಹೈಡ್ರಾಮಾ ಆರಂಭಿಸಿದ್ದು, ಹಿನ್ನೆಲೆ ರಸ್ತೆ ಸಂಚಾರ ಅಸ್ತವ್ಯಸ್ತವಗೊಮಡಿದೆ. ಬಳಿಕ ಸ್ಥಳಕ್ಕೆ ಪೋಲಿಸರು ಆಗಮಿಸಿ ಮಂಗಳಮುಖಿಯರ ಡ್ರಾಮಾಗೆ ತೆರೆ ಎಳೆದಿದ್ದಾರೆ.