Belagavi; ಸೋಲಾರ್ ದೀಪ ಕದ್ದು, ದನದ ಬುರುಡೆ ಹಾಕಿ ವಿಕೃತಿ!

Jun 6, 2022, 3:35 PM IST

ಬೆಳಗಾವಿ(ಜೂ.6): ಸೋಲಾರ್ ವಿದ್ಯುತ್  ಕಂಬದ ಮೇಲಿದ್ದ ಲೈಟ್ ಕಳ್ಳತನ ಮಾಡಿ ಕಂಬಕ್ಕೆ ದನದ ತಲೆಬುರುಡೆ ಕಟ್ಟಿ ವಿಕೃತಿ ಮೆರೆದ ಘಟನೆ ಗೋಕಾಕ ನಗರದಲ್ಲಿ ನಡೆದಿದೆ. ಗೋಕಾಕ್ ನಗರ ಹಾಗೂ ಗೋಕಾಕ್ ಫಾಲ್ಸ್ ರಸ್ತೆ ಮಧ್ಯೆ ಹಲವು ಸೋಲಾರ ವಿದ್ಯುತ್ ದೀಪಗಳಿವೆ. ಕಳೆದ ನಾಲ್ಕು ದಿನಗಳ ಹಿಂದೆ ಯಾರೋ ದುಷ್ಕರ್ಮಿಗಳು ಸೋಲಾರ್ ದೀಪ ಕಳ್ಳತನ ಮಾಡಿ ಕಂಬಕ್ಕೆ ದನದ ತಲೆ ಬುರುಡೆ ಕಟ್ಟಿ ವಿಕೃತಿ ಮೆರೆದಿದ್ದರು.

TEXTBOOK REVISION; ‘ಆಡಿಸಿ ನೋಡು’ ಗೀತೆಯ ಕರ್ತೃ ಹೆಸರೇ ಬದಲು ಮಾಡಿದ ಚಕ್ರತೀರ್ಥ ಸಮಿತಿ!

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನಿನ್ನೆ ಗೋಕಾಕ ನಗರಸಭೆ ಸಿಬ್ಬಂದಿ ಕಂಬಕ್ಕೆ ಕಟ್ಟಿದ ದನದ ತಲೆ ಬುರುಡೆ ತೆರವುಗೊಳಿಸಿದ್ದಾರೆ. ಗೋಕಾಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.