ಹಳ್ಳ ಹಿಡಿದ ಬೃಹತ್ ಕುಡಿಯುವ ನೀರಿನ ಯೋಜನೆ: ಬಾಗಲಕೋಟೆ ಉಸ್ತುವಾರಿ ಮಂತ್ರಿಗಳೇ ಇಲ್ನೋಡಿ

Dec 20, 2020, 10:05 PM IST

ಬಾಗಲೋಟೆ, (ಡಿ.20): ಯಾಕೋ ಏನೋ ಆ ಊರುಗಳ ಹಣೆ ಬರಹವೇ ಚೆನ್ನಾಗಿಲ್ಲ. ಆ ಹಳ್ಳಿಗಳಿಗೆ ಕಳೆದ 10 ವಷ೯ದ ಹಿಂದೆ ಬೃಹತ್ ಕುಡಿಯೋ ನೀರಿನ ಯೋಜನೆ ರೂಪಿಸಿ, ಕೋಟಿ ಕೋಟಿ ಹಣ ಖಚು೯ ಮಾಡಿದ ನಂತರ ಈ ಬಹು ಹಳ್ಳಿ ಕುಡಿಯುವ ನೀರಿನ ಯೋಜನೆ ಜಾರಿಗೂ ಬಂದಿತ್ತು. 

ಇದಾಗಿ ಈಗ ದಶಕವೇ ಕಳೆಯುತ್ತಾ ಬಂದ್ರು ಇದ್ರಿಂದ ಹನಿ ನೀರು ಸಹ ಈ ಊರುಗಳಿಗೆ ಬಂದಿಲ್ಲ. ಸಾಲದ್ದಕ್ಕೆ ಬೋರವೆಲ್ ಮೂಲಕ ಬರೋ ನೀರು ಸಹ ಪ್ಲೋರೈಡ್ ಯುಕ್ತವಾಗಿರೋದ್ರಿಂದ ಜನ್ರು ಸ್ನಾಯು ಸೆಳೆತ ಸೇರಿದಂತೆ ಕೆಲವು ಕಾಯಿಲೆಗಳಿಗೂ ತುತ್ತಾಗ್ತಿದ್ದಾರೆ. ಹಾಗಾದ್ರೆ ಅದ್ಯಾವ ಯೋಜನೆ? ದಶಕದಿಂದ ಇರೋ ಸಮಸ್ಯೆ ಆದ್ರೂ ಏನು ಅಂತೀರಾ. ಈ ಕುರಿತ ವರದಿ ಇಲ್ಲಿದೆ.