Nov 27, 2021, 3:21 PM IST
ಬೀದರ್ (ನ. 27): ದಕ್ಷಿಣ ಕಾಶಿ ಅಂತಲೇ ಪ್ರಸಿದ್ಧಿ ಪಡೆದಿರುವ ಬೀದರ್ (Bidar) ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿರುವ ಮೈಲಾರ ಮಲ್ಲಣ್ಣ ದೇವಾಲಯದ ತ್ರೆತಾಯುಗ ಕಾಲದಿಂದ ಪ್ರಸಿದ್ಧಿ ಹೊಂದಿದೆ. ಇಲ್ಲಿ 101 ಪವಿತ್ರವಾದ ಹೊಂಡಗಳು ಇದ್ದು ಒಂದೊಂದು ಕುಂಡಗಳು ಒಂದೊಂದು ವಿಶೇಷತೆಯನ್ನ ಹೊಂದಿವೆ. ಪುರಾತತ್ವ ಇಲಾಖೆಯ ದಿವ್ಯ ನಿರ್ಲಕ್ಷದಿಂದ ತನ್ನ ಗತ ವೈಭವವನ್ನ ಕಳೆದುಕೊಂಡು ತನ್ನ ಕೊನೆಯ ದಿನಗಳನ್ನ ಎಣಿಸುತ್ತಿವೆ. ಒಂದು ಕಾಲದಲ್ಲಿ ಇಲ್ಲಿಗೆ ಬರುವ ಭಕ್ತರ ಆರೋಗ್ಯ ಸಂಜೀವಿನಿಯಾಗಿದ್ದ ಇಲ್ಲಿನ ಹೊಂಡಗಳು ಈಗ ಮಾಯವಾಗುತ್ತಿವೆ. ಪ್ರತಿನಿತ್ಯ ಇಲ್ಲಿಗೆ ಬರುವ ಸಾವಿರಾರು ಭಕ್ತರು ಇಲ್ಲಿನ ಹೊಂಡಗಳಲ್ಲಿ ಪವಿತ್ರವಾದ ಸ್ನಾನ ಮಾಡಿ ದೇವರ ದರ್ಶನ ಪಡೆದುಕೊಂಡು ಪುನೀತರಾಗುತ್ತಿದ್ದರು.
Bidar: ಉದ್ಯೋಗ ಬಿಟ್ಟು ಬರಡು ಭೂಮಿಯಲ್ಲಿ ಬೆಳೆ ಬೆಳೆದು ಯಶಸ್ವಿಯಾದ ಯುವ ರೈತ!
ದೇವಸ್ಥಾನದ ಪಕ್ಕದಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆಯಲು ಅನುಕೂಲವಾಗಲೆಂದು ಒಂದು ಹೊಂಡ ಮಾತ್ರ ಭಕ್ತರು ಉಪಯೋಗಿಸುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ಹೀಗೆ ಮುಂದುವರೆದರೆ ಇತಿಹಾಸ ಸಾರುವ ಅದ್ಭುತ ದೇವಸ್ಥಾನದ ಕುರುಹು ಕೂಡ ಉಳಿಯುವುದರಲ್ಲಿ ಅನುಮಾನವೇ ಇಲ್ಲಾ. ಕೂಡಲೇ ಸರ್ಕಾರ ಇತ್ತ ಗಮನ ಹರಿಸಿ ದೇವಸ್ಥಾನದ ಕುರುಹುಗಳನ್ನ ಕಾಪಾಡಬೇಕೆಂಬುದು ಭಕ್ತರ ಒತ್ತಾಸೆಯಾಗಿದೆ.