Shivamogga: ಅಪ್ರಾಪ್ತೆಯ ರೇಪ್ ಮಾಡಿ ಅಶ್ಲೀಲ ವಿಡಿಯೋ ಚಿತ್ರೀಕರಣ, ಇಬ್ಬರ ಬಂಧನ

Jan 22, 2022, 5:53 PM IST

ಶಿವಮೊಗ್ಗ (ಜ. 22): ನಿಮ್ಮ ಊರಿಗೆ ಹೋಗೋಣ ಎಂದು ಕಾರಿನಲ್ಲಿ ಕರೆದೊಯ್ದು, ಬಾಲಕಿಯ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಕಿರಾತಕರು. ಅತ್ಯಾಚಾರ (Rape) ಆರೋಪದ ಮೇಲೆ ಪೊದಡಿ ಸಂತೋಷ್ (24) , ಸುನೀಲ್ (26) ಎನ್ನುವವರನ್ನು ಬಂಧಿಸಲಾಗಿದೆ.  ಹೊಸನಗರ (Hosanagar) ಪೋಲಿಸ್ ಠಾಣೆಯಲ್ಲಿ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ. 

ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ 17 ವರ್ಷದ ಬಾಲಕಿ ಜ.15 ರಂದು ಮಧ್ಯಾಹ್ನ ಊರಿಗೆ ಹೋಗಲು ಹೊಸನಗರ ಬಸ್ ನಿಲ್ದಾಣದ ಬಳಿ ನಿಂತಿದ್ದಳು. ಈ ಹಿಂದೆ ಬಾಲಕಿಯ ಮನೆಗೆ ಜೆಸಿಬಿ ಕೆಲಸಕ್ಕೆಂದು ಬಂದಿದ್ದ ಸಂತೋಷ್ ಮತ್ತು ಸುನೀಲ್,  ನಾವು ಕೂಡ ನಿಮ್ಮ ಗ್ರಾಮದ ಕಡೆಗೆ ಹೋಗುತ್ತೇವೆ. ನಮ್ಮ ಜತೆ ಕಾರಿನಲ್ಲಿ ಬಾ ಎಂದು ಆಕೆಯನ್ನು ಪುಸಲಾಯಿಸಿ ಕರೆದೊಯ್ದಿದ್ದಾರೆ.  ಅಶ್ಲೀಲ ವಿಡಿಯೋ ಚಿತ್ರೀಕರಿಸಿ  ಯಾರಿಗೂ ಹೇಳದಂತೆ ಬಾಲಕಿಗೆ ಬೆದರಿಕೆ ಹಾಕಿದ್ದಾರೆ.  ಅಶ್ಲೀಲ ವಿಡಿಯೋವನ್ನು ರಾಘವೇಂದ್ರ , ಸಚಿನ್ ಮತ್ತು ಸುಬ್ಬು  ಮೊಬೈಲ್‌ಗಳಿಗೆ ಕಳುಹಿಸಿದ್ದರು . ಇವರ ಮೇಲೆ ಎಫ್‌ಐಆರ್ ದಾಖಲಾಗಿದೆ.  ಅಪ್ರಾಪ್ತೆಯನ್ನು ಸಾಂತ್ವನ ಕೇಂದ್ರಕ್ಕೆ ಸೇರಿಸಿ ಹೇಳಿಕೆ ಪಡೆಯಲಾಗಿದೆ.