Aug 29, 2019, 10:41 AM IST
ಶಿವಮೊಗ್ಗ[ಆ.29]: ಬ್ಲೂವೇಲ್ ಎಂಬ ನಿಗೂಢ ಆಟ ಮಕ್ಕಳನ್ನು ಬಲಿಪಡೆದುಕೊಂಡಿತ್ತು. ಇದೀಗ ಪಬ್‌ಜೀ ಆಟವೂ ಮಕ್ಕಳ ಪ್ರಾಣಕ್ಕೆ ಕುತ್ತಾಗಿ ಪರಿಣಮಿಸುತ್ತಿದೆ. ಹೌದು ಶಿವಮೊಗ್ಗದ ಹಕ್ಕಿಪಿಕ್ಕಿ ಕ್ಯಾಂಪ್‌ನ ರಗ್ಗೇಶ್ ಮತ್ತು ಸುಧಾ ದಂಪತಿಯ ಕೊನೆ ಪುತ್ರ 17 ವರ್ಷದ ಪ್ರೀತಂ ಪಬ್‌ಜೀ ಆಟಕ್ಕೆ ಬಲಿಯಾಗಿದ್ದಾನೆ. ಹೌದು ಹಗಲಿರುಳೆನ್ನದೇ ಪಬ್‌ಜೀ ಆಟವಡುತ್ತಿದ್ದ ಪ್ರೀತಂ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾನೆ