Uttara Kannada: ಸುಮಾರು 1,500ಕ್ಕೂ ಹೆಚ್ಚು ಆಲಿವ್ ರಿಡ್ಲೇ ಸಮುದ್ರಕ್ಕೆ ಸೇರಿಸಿದ ಅರಣ್ಯ ಇಲಾಖೆ

Uttara Kannada: ಸುಮಾರು 1,500ಕ್ಕೂ ಹೆಚ್ಚು ಆಲಿವ್ ರಿಡ್ಲೇ ಸಮುದ್ರಕ್ಕೆ ಸೇರಿಸಿದ ಅರಣ್ಯ ಇಲಾಖೆ

Suvarna News   | Asianet News
Published : Mar 10, 2022, 03:46 PM IST

ಕಡಲಾಮೆಗಳು ಇತ್ತೀಚಿನ ದಿನಗಳಲ್ಲಿ ಅಳಿವಿನ ಅಂಚಿನಲ್ಲಿರುವ ಪ್ರಭೇದಗಳ ಸಾಲಿಗೆ ಸೇರಿವೆ. ಈ ಆಮೆಗಳ ಸಂತತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯ ಅರಣ್ಯ ಇಲಾಖೆ ಇವುಗಳ ಮೊಟ್ಟೆಗಳನ್ನು ಸಂರಕ್ಷಿಸುವ ಕೆಲಸವನ್ನ ಆರಂಭಿಸಿದೆ. 

ಕಡಲಾಮೆಗಳು ಇತ್ತೀಚಿನ ದಿನಗಳಲ್ಲಿ ಅಳಿವಿನ ಅಂಚಿನಲ್ಲಿರುವ ಪ್ರಭೇದಗಳ ಸಾಲಿಗೆ ಸೇರಿವೆ. ಈ ಆಮೆಗಳ ಸಂತತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯ ಅರಣ್ಯ ಇಲಾಖೆ ಇವುಗಳ ಮೊಟ್ಟೆಗಳನ್ನು ಸಂರಕ್ಷಿಸುವ ಕೆಲಸವನ್ನ ಆರಂಭಿಸಿದೆ. ಹೀಗೆ ಸಂರಕ್ಷಿಸಲಾಗಿದ್ದ ಮೊಟ್ಟೆಗಳು ಇದೀಗ ಮರಿಗಳಾಗಿ ಹೊರಬಂದಿದ್ದು, ಅವುಗಳನ್ನ ಇಂದು ಸಮುದ್ರಕ್ಕೆ ಸೇರಿಸುವ ಕಾರ್ಯವನ್ನು ಮಾಡಲಾಯಿತು.

ಕಾರವಾರ ತಾಲ್ಲೂಕಿನ ದೇವಭಾಗ್ ಕಡಲತೀರದಲ್ಲಿ. ಅರಣ್ಯ ಇಲಾಖೆ ವತಿಯಿಂದ ಇದೇ ಮೊದಲಬಾರಿಗೆ ದೇವಭಾಗ್ ಕಡಲತೀರದಲ್ಲಿ ಆಲಿವ್ ರಿಡ್ಲೇ ಪ್ರಭೇದದ ಆಮೆಯ ಮೊಟ್ಟೆಗಳನ್ನು ಸಂರಕ್ಷಿಸಿಡಲಾಗಿದ್ದು,  ಆ ಮೊಟ್ಟೆಗಳು ಒಡೆದು ಮರಿಗಳು ಹೊರಬಂದಿವೆ. ಈ ನಿಟ್ಟಿನಲ್ಲಿ ಸಂರಕ್ಷಿಸಲ್ಪಟ್ಟ ಆಮೆಯ ಮರಿಗಳನ್ನು ಸುರಕ್ಷಿತವಾಗಿ ಸಮುದ್ರಕ್ಕೆ ಸೇರಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡಿದೆ. ದೇವಭಾಗ್ ಕಡಲತೀರದಲ್ಲಿ ಕಳೆದ ಜನವರಿಯಲ್ಲಿ ಆಲಿವ್ ರಿಡ್ಲೇ ಕಡಲಾಮೆ ಒಟ್ಟು 103 ಮೊಟ್ಟೆಗಳನ್ನು ಇಟ್ಟಿದ್ದು, ಅವುಗಳನ್ನು ಕಡಲತೀರದಲ್ಲಿಯೇ ಪಂಜರ ಹಾಕಿ ಸಂರಕ್ಷಿಸಲಾಗಿತ್ತು. 

ಇಂದು ಆ ಮೊಟ್ಟೆಗಳು ಮರಿಗಳಾಗಿ ಹೊರಬಂದಿವೆ. ಕಡಲಾಮೆ ಮೊಟ್ಟೆಗಳು 45 ರಿಂದ 60 ದಿನಗಳಲ್ಲಿ ಮರಿಗಳಾಗಿ ಹೊರಬರುತ್ತವೆ. ಹೀಗಾಗಿ ಆಮೆಗಳು ಮೊಟ್ಟೆ ಇಟ್ಟ ಸ್ಥಳದಲ್ಲಿಯೇ ಅವುಗಳ ಗೂಡಿಗೆ ಪಂಜರ ಹಾಕಿ ನಾಯಿ ಇಲ್ಲವೇ ಇತರೆ ಪ್ರಾಣಿಗಳಿಗೆ ಸಿಗದಂತೆ ರಕ್ಷಣೆ ಮಾಡಲಾಗುತ್ತದೆ. ಬಳಿಕ ಅವುಗಳು ಮರಿಯಾದ ಬಳಿಕ ಸಮುದ್ರಕ್ಕೆ ಬಿಡಲಾಗುತ್ತದೆ. ಈ ಮೂಲಕ ಅಳಿವಿನ ಅಂಚಿನಲ್ಲಿರುವ ಕಡಲಾಮೆ ಸಂತತಿಯನ್ನು ಸಂರಕ್ಷಿಸಲು ಅರಣ್ಯ ಇಲಾಖೆ ಕಾರ್ಯಪ್ರವೃತ್ತವಾಗಿದೆ. 

 ಇನ್ನು ಕಡಲಾಮೆಗಳಲ್ಲಿ 7 ಪ್ರಭೇದಗಳಿದ್ದು, ರಾಜ್ಯದ ಕಡಲತೀರದಲ್ಲಿ 3 ಬಗೆಯ ಕಡಲಾಮೆಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಆಲಿವ್ ರಿಡ್ಲೇ ಕಡಲಾಮೆ ಮಾತ್ರ ಕಡಲತೀರದಲ್ಲಿ ಮೊಟ್ಟೆ ಇಡುವ ಪ್ರಭೇದವಾಗಿದೆ. ಕಡಲಾಮೆಗಳ ಸಂತತಿ ಅಳಿವಿನ ಅಂಚಿನಲ್ಲಿರುವ ಕಾರಣದಿಂದ ಜಿಲ್ಲೆಯ ಅರಣ್ಯ ಇಲಾಖೆ ಅವುಗಳ ರಕ್ಷಣೆಗೆ ಕೋಸ್ಟಲ್ ಮರೈನ್ ಆ್ಯಂಡ್ ಇಕೋ ಸಿಸ್ಟಮ್ ಎನ್ನುವ ವಿಭಾಗವನ್ನು ರೂಪಿಸಿದೆ. ಇದರಡಿಯಲ್ಲಿ ಈಗಾಗಲೇ ಕಾರವಾರ ವಿಭಾಗದ ದೇವಭಾಗ್ ಹಾಗೂ ಅಂಕೋಲಾದ ಖೇಣಿ ಕಡಲತೀರದಲ್ಲಿ ಒಟ್ಟು 14 ಕಡೆ ಆಮೆಯ ಗೂಡುಗಳನ್ನು ಪತ್ತೆ ಹಚ್ಚಲಾಗಿದ್ದು, ಸರಿಸುಮಾರು 1,500ಕ್ಕೂ ಅಧಿಕ ಆಮೆಯ ಮೊಟ್ಟೆಗಳನ್ನು ಸಂರಕ್ಷಿಸಲಾಗಿದೆ. 
ಅಲ್ಲದೇ, ಆಮೆಯ ಗೂಡುಗಳ ಕುರಿತು ಮಾಹಿತಿ ನೀಡುವ ಸಾರ್ವಜನಿಕರಿಗೆ ಒಂದು ಸಾವಿರ ರೂಪಾಯಿ ಸಹಾಯಧನ ನೀಡುತ್ತಿದ್ದು, ಇದರಿಂದ ಸಾರ್ವಜನಿಕರಿಂದಲೂ ಇದೀಗ ಕಡಲಾಮೆ ಸಂತತಿ ರಕ್ಷಣೆಗೆ ಸಹಕಾರಿಯಾಗಿದೆ. ಇನ್ನು, ಕಡಲಾಮೆಗಳು ಕಡಲ ಪರಿಸರದ ಸಮತೋಲನ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಅವುಗಳ ರಕ್ಷಣೆ ಅತ್ಯಗತ್ಯವಾಗಿದೆ. 
 

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
Read more