Dec 14, 2023, 10:45 AM IST
ಏಷ್ಯಾನೆಟ್ ಸುವರ್ಣ ನ್ಯೂಸ್ ಸಹಯೋಗದಲ್ಲಿ ಪರಿಶ್ರಮ ಪಿಯು ಕಾಲೇಜು ಹಾಗೂ ಭಿಮಾ ಗೋಲ್ಡ್ ಪ್ರಸ್ತುತ ಪಡಿಸುವ ಪ್ರಜಾವಾಣಿ ಕ್ವಿಜ್ ಕಾಂಪಿಟೇಶನ್‌ನಲ್ಲಿ(Prajavani Quiz Competition) 8,9,10ನೇ ತರಗತಿಯಲ್ಲಿ ಓದುವ ಮಕ್ಕಳಿಗಾಗಿ(Children) ಕ್ಚಿಜ್ ಕಾಂಪಿಟೇಶನ್ ಸ್ಪರ್ದೆ ಏರ್ಪಡಿಸಲಾಗಿತ್ತು. ಧಾರವಾಡದ(Dharwad) ಸೃಜನಾ ರಂಗ ಮಂದಿರದಲ್ಲಿ ಸ್ಪರ್ಧೆಯನ್ನ ಏರ್ಪಡಿಲಾಗಿತ್ತು. ಐದು ವಲಯವಾರುಗಳಲ್ಲಿ ನಡೆಯುವ ಕ್ವಿಜ್ ಕಾಂಪಿಟೇಶನ್ ಇದೆ. ಡಿಸೆಂಬರ್ .16 ರಂದು ಬೆಂಗಳೂರಿನಲ್ಲಿ(Bengaluru) ಕೊನೆಗೊಳ್ಳುತ್ತಿದೆ. ವಲಯವಾರು ಆಯ್ಕೆಯಾದ ಐದು ತಂಡಗಳಿಗೆ ರಾಜ್ಯಪಾಲರಿಂದ ಗೌರವವಿಸಲಾಗುವುದು. ಸದ್ಯ ಈ ರಸ ಪ್ರಶ್ನೆ ಕಾರ್ಯಕ್ರಮದಲ್ಲಿ 100 ತಂಡಗಳು ಭಾಗವಹಿಸಿದ್ದವು. ಇಂದು ಸರ್ಕಾರದ ಆದರ್ಶ ವಿದ್ಯಾಲಯ ಹುಬ್ಬಳ್ಳಿ ಆವೃತ್ತಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಪ್ರಜಾವಾಣಿ ತಂಡದ ಕಡೆಯಿಂದ ದಿವಾಕರ್ ಭಟ್, ರಾಹುಲ್ ಬೆಳಗಲಿ, ಪ್ರಮೋದ್ ಸಿ, ಯೋಗೀಶ , ಆನಂದ ಯಮನೂರು ಕ್ಚಿಜ್ ಕಾಂಪಿಟೇಶನ್‌ನಲ್ಲಿ ಭಾಗವಹಸಿದ್ದರು. ಇನ್ನು ಈ ಕ್ವಿಜ್ ಕಾಂಪಿಟೇಶನ್ ನಲ್ಲಿ ಮೇಘ ವಿ ಗೌಡ, ಕ್ಯೂರಾಸಿಟಿ ನಾಲೆಡ್ಜ್ ಸಲೂಶೆನ್ಸ್ ಇವರ ಕಡೆಯಿಂದ ಕ್ಚಿಜ್ ಮಾಸ್ಟರ್ ಆಗಿ ಭಾಗವಹಿಸಿದ್ದರು.
ಇದನ್ನೂ ವೀಕ್ಷಿಸಿ: ಈಯರ್ ಎಂಡ್‌ನಲ್ಲಿ ಸ್ಟಾರ್ ಸಿನಿಮಾಗಳ ಧಮಾಕ..! ಡಿಸೆಂಬರ್ ಕೊನೆಯಲ್ಲಿ ಹಿಂದಿ,ತೆಲುಗು,ಕನ್ನಡ ಚಿತ್ರಗಳ ಹಬ್ಬ..!