Mar 16, 2022, 5:04 PM IST
ಚಿತ್ರದುರ್ಗ (ಮಾ. 16): ಕ್ರಿಕೆಟ್ ಗ್ರೌಂಡ್ ಅಂದ್ರೆ ಚಿಯರ್ ಗರ್ಲ್ಸ್ ಹಾಗೂ ಅವರ ಫೇವರಟ್ ಕ್ರಿಕೆಟ್ ಆಟಗಾರರ ಭಾವಚಿತ್ರ ಹಿಡಿದು ಕೇಕೆ ಹಾಕ್ತಾ ಎಂಜಾಯ್ ಮಾಡೋದು ಕಾಮನ್. ಆದ್ರೆ ಕೋಟೆನಾಡಿನ ಅಪ್ಪು ಫ್ಯಾನ್ಸ್ ಮಾತ್ರ ಡಿಫರೆಂಟ್ ಆಗಿ ಪವರ್ ಸ್ಟಾರ್ ಸವಿನೆನಪಿಗಾಗಿ ಪುನೀತ್ ಅಭಿನಯದ ಎಲ್ಲಾ ಚಿತ್ರಗಳ ಭಾವಚಿತ್ರಗಳನ್ನು ಕ್ರೀಡಾಂಗಣದ ಸುತ್ತಾ ಹಾಕಿರೋದು ವಿಶೇಷ.
ನಮಗೆಲ್ಲಾ ತಿಳಿದಿರುವಂತೆ ಸಿನಿಮಾ ನಟ ಅಂದ್ರೆ ಕೇವಲ ನಟನೆ ಮೂಲಕ ಜನರನ್ನು ರಂಜಿಸಿ ಸಿನಿಮಾದಲ್ಲಿ ಹೀರೋ ಆಗಿರ್ತಿದ್ರು. ಆದ್ರೆ ನಿಜ ಜೀವನದಲ್ಲೂ ಹಲವು ಸಮಾಜ ಸೇವಾ ಕಾರ್ಯಗಳಿಂದ ರಿಯಲ್ ಹೀರೊ ಎನಿಸಿರೋ, ಪವರ್ ಸ್ಟಾರ್ ಅಂದ್ರೆ ಸಾಕು, ಒಂದು ಕ್ಷಣ ಎಲ್ಲರ ಕಿವಿ ನಿಮಿರುವುದು. ಹಿರಿಯರು, ಕಿರಿಯರು ಎನ್ನದೇ ಎಲ್ಲರ ಹೃದಯಗೆದ್ದ ನಾಯಕನಟ ಎನಿಸಿರುವ ಡಾ.ಪುನೀತ್ ರಾಜ್ ಕುಮಾರ್ ಜನ್ಮದಿನವು ಮಾರ್ಚ್17 ರಂದು ನಡೆಯಲಿದೆ. ಆ ಸವಿನೆನಪಿಗಾಗಿ ಕೋಟೆನಾಡು ಚಿತ್ರದುರ್ಗದ ಜೆ.ಜೆ. ಹಟ್ಟಿ ಪವರ್ಸ್ಟಾರ್ ಯುವಕರ ಬಳಗವು ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದ್ದಾರೆ.
ಆ ಪಂದ್ಯಾವಳಿ ನಡೆಯುತ್ತಿರುವ ಹಳೇ ಮಾದ್ಯಮಿಕ ಶಾಲಾ ಆವರಣ ಅಪ್ಪು ಭಾವಚಿತ್ರಗಳಿಂದ ರಾರಾಜಿಸುತ್ತಿದೆ. ಮೈದಾನದ ಸುತ್ತಲೂ ಪುನೀತ್ ರಾಜ್ ಕುಮಾರ್ ನಟಿಸಿದ 30 ಚಿತ್ರಗಳಲ್ಲಿನ ನಟನೆಯ ಭಾವಚಿತ್ರ ಎಲ್ಲೆಡೆ ಆಕರ್ಷಿಸುತ್ತಿದೆ. ಅಲ್ಲದೇ ಭಾವ ಚಿತ್ರ ದೊಂದಿಗೆ ಕರ್ನಾಟಕ ರಾಜ್ಯದ ಬಾವುಟ ನೋಡುಗರ ಕಣ್ಮನ ಸೆಳೆಯುತಿದ್ದೂ, ಕ್ರಿಕೆಟ್ ಪ್ರೇಮಿಗಳ ಮನದಲ್ಲೂ ಅಪ್ಪು ಮನೆಮಾಡಿದ್ದೂ, ಅವರ ಜನ್ಮದಿನಕ್ಕೆ ಈ ರೀತಿ ವಿಶೇಷ ಕ್ರಿಕೆಟ್ ಪಂದ್ಯಾವಳಿ ಮೂಲಕ ಅವರ ಆದರ್ಶಗಳನ್ನು ಸ್ಮರಿಸಿದರು.
ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಆಟಗಾರರಿಗೆ ಅಪ್ಪು ಭಾವಚಿತ್ರವಿರುವ ಮೆಡಲ್‌ಗಳನ್ನು ಪಂದ್ಯದ ಮ್ಯಾನ್ ಆಫ್ ದ ಮ್ಯಾಚ್ ಆಗಿ ನೀಡಲಾಯಿತು. ಅಲ್ಲದೇ ಇಲ್ಲಿಯವರೆಗೆ ನಡೆದ ಪಂದ್ಯಾವಳಿಗಳಿಗಿಂತ ಈ ಟೂರ್ನಮೆಂಟ್ ವಿಶೇಷ ಎನಿಸಿತ್ತು. ಹೀಗಾಗಿ ಉತ್ಸಾಹದಿಂದ ಭಾಗವಹಿಸಿದ ಕ್ರೀಡಾಪಟುಗಳೆಲ್ಲರು ಅಪ್ಪು ಅವರ ಜನ್ಮ ದಿನದಂದು ತೆರೆಕಾಣಲಿರುವ ಜೇಮ್ಸ್ ಚಿತ್ರ ಶತದಿನೋತ್ಸವ ಆಚರಿಸಲಿ ಅಂತ ಶುಭ ಹಾರೈಸಿದರು.