Jan 3, 2024, 2:38 PM IST
ಆ ಫ್ಯಾಕ್ಟರಿ ಸದ್ಯಕ್ಕೆ ಅಲ್ಲಿ ಇಲ್ಲ.. ಇದು 1955ರಲ್ಲಿ ಆರಂಭವಾಗಿದ್ದ ಫ್ಯಾಕ್ಟರಿ.. 1999ರ ವರೆಗೂ ಕೆಲಸ ಮಾಡಿ ಆ ಬಳಿಕ ಕಾರ್ಖಾನೆ(Factory) ಮುಚ್ಚಿದೆ.. ಆದರೆ, ಮುಚ್ಚಿದ ಕಾರ್ಖಾನೆಯೊಂದು ಈಗ ತನ್ನ ಹಕ್ಕು ಕೇಳಿಕೊಂಡು ಸಾವಿರಾರು ಜನರ ಬದುಕನ್ನ ಬೀದಿಗೆ ತರುವ ಹುನ್ನಾರ ನಡೆಸುತ್ತಿದೆ. ಅದು 1955.. ಕರ್ನಾಟಕ ಆಗತಾನೇ ಅಭಿವೃದ್ದಿಯತ್ತ ಸಾಗುತ್ತಿತ್ತು.. ರಾಜ್ಯದಲ್ಲಿ ಉದ್ಯೋಗ ಕೊರತೆ ಆದಾಯದ ಕೊರತೆ ಹೆಚ್ಚಾಗಿತ್ತು.. ಇದನ್ನ ನೀಗಿಸಲು ಆಗಿನ ಸರ್ಕಾರ ಉದ್ಯಮಿಗಳಿಗೆ ಒಂದಷ್ಟು ಎಕರೆ ಪ್ರದೇಶವನ್ನ ನೀಡಿ ಕೈಗಾರಿಕರಣಕ್ಕೆ ಹೆಚ್ಚಿನ ಒತ್ತು ನೀಡಿತ್ತು. ಅದರಂತೆ ಶಿವಮೊಗ್ಗದಲ್ಲಿ(Shivamogga) ಉದ್ಯೋಗ ಸೃಷ್ಟಿಯಾಗಲು ಮತ್ತು ಆದಾಯ ವೃದ್ದಿಯಾಗಲು ಬಾಂಬೆ ಮೂಲದ ಉದ್ಯಮಿಯೊಬ್ಬರಿಗೆ 3500 ಎಕರೆ ಪ್ರದೇಶವನ್ನ ಮಂಜೂರು ಮಾಡಿತ್ತು. ಆ ಜಾಗದಲ್ಲಿ ಕಬ್ಬು ಬೆಳೆಯಲು ಅವಕಾಶ ಕಲ್ಪಿಸಿತ್ತು. ಅದರಂತೆ ಅಲ್ಲಿ ತುಂಗಭದ್ರಾ ಶುಗರ್ಸ್(Tungabhadra Sugar Company) ಅನ್ನುವ ಸಕ್ಕರೆ ಫ್ಯಾಕ್ಟರಿ ಆರಂಭವಾಗಿತ್ತು. ಸಾವಿರಾರು ಮಂದಿ ಕಾರ್ಮಿಕರಿಗೆ ಕೆಲಸವೂ ಸಿಕ್ಕಿತ್ತು. ಸರ್ಕಾರ ನಿಗದಿ ಮಾಡಿದ ಜಮೀನಿನಲ್ಲಿ ಕಬ್ಬು ಬೆಳೆಯಬೇಕಾಗಿದ್ದ ಕಂಪನಿ ಕಬ್ಬನ್ನ ಬೆಳೆಯದೇ ಪಾಡು ಬಿಟ್ಟಿತ್ತು. ಈ ಪಾಡು ಬಿಟ್ಟ ಜಮೀನಿನಲ್ಲಿ ಕಾಲಾಂತರದಲ್ಲಿ ಜನ ತಮ್ಮ ತಮ್ಮ ಜೀವನ ಕಟ್ಟಿಕೊಂಡು ಸಣ್ಣ ಗ್ರಾಮ ಗ್ರಾಮಗಳಾಗಿ ಮಾಡಿಕೊಂಡರು.
1955ರಲ್ಲಿ ಆರಂಭವಾಗಿದ್ದ ತುಂಗಭದ್ರಾ ಶುಗರ್ಸ್ ಫ್ಯಾಕ್ಟರಿ 1995 ರಲ್ಲಿ ದೇವಿ ಶುಗರ್ಸ್ ಕಂಪನಿಗೆ ಮಾರಾಟಗೊಂಡಿತ್ತು.. ಆ ಕಂಪನಿಯೂ ಕೂಡಾ ನಾಲ್ಕು ವರ್ಷ ಕೆಲಸ ಮಾಡಿ ಶುಗರ್ ಫ್ಯಾಕ್ಟರಿಯನ್ನ ಬಂದ್ ಮಾಡಿತ್ತು. ಇಷ್ಟರಲ್ಲಾಗಲೇ ಆ ಭಾಗದಲ್ಲಿ ಐದಾರು ಊರುಗಳು ಗಟ್ಟಿಯಾಗಿ ನಿರ್ಮಾಣವಾಗಿದ್ದವು. ಅಲ್ಲಿನ ಜನರಿಗೆ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಓಟರ್ ಕಾರ್ಡ್ ಎಲ್ಲರೂ ದೊರೆತು ಪಂಚಾಯ್ತಿಗಳಿಂದ ಕರೆಂಟ್ ರಸ್ತೆ ನೀರಿನ ಸೌಲಭ್ಯ ಎಲ್ಲವೂ ದೊರೆತಿತ್ತು. ಆ ಮೂಲಕ ಕರ್ನಾಟಕದ ಗ್ರಾಮಗಳ ಪಟ್ಟಿಗೆ ಸೇರಿಕೊಂಡಿದ್ದವು.. ಆದರೆ, ಮೊನ್ನೆ ಕರ್ನಾಟಕದ ಹೈಕೊರ್ಟ್ ನೀಡಿದ್ದ ಒಂದು ಆದೇಶ ಈ ಬಾಗದ ಜನರನ್ನ ಆತಂಕಕ್ಕೆ ಇಡುಮಾಡಿದೆ.
ದೇವಿ ಶುಗರ್ ಕಂಪನಿ ತಾನು ಹೊಂದಿದ್ದ 3500 ಎಕರೆ ಪ್ರದೇಶವನ್ನ ತನಗೆ ಸೇರಿದ್ದು ಎಂದು ಹೈಕೊರ್ಟ್ ಗೆ ಮನವಿ ಮಾಡಿತ್ತು.. ಅರ್ಜಿ ವಿಚಾರಣೆ ನಡೆಸಿದ ನ್ಯಾಯಲಯ ಕಂಪನಿ ನೀಡಿರುವ ಅರ್ಜಿಯನ್ನ ಪರಿಶೀಲಿಸುವಂತೆ ಶಿವಮೊಗ್ಗ ತಹಶೀಲ್ದಾರ್ ಅವರಿಗೆ ನಿರ್ದೇಶನ ನೀಡಿದೆ. ಪರಿಶೀಲನೆ ನಡೆಸುವಂತೆ ಮಾತ್ರ ನ್ಯಾಯಾಲಯ ಆದೇಶ ನೀಡಿದೆ ಹೊರತು, ಹಸ್ತಾಂತರ ಮಾಡುವಂತೆ ಹೇಳಿಲ್ಲ. ಕಂಪನಿಯ ಅರ್ಜಿ ಪರಿಶೀಲನೆ ಆದೇಶ ಈ ಭಾಗದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಎಲ್ಲಿ ನಮ್ಮ ಮನೆ ಆಸ್ತಿಗಳು ವಾಪಾಸ್ ಕಂಪನಿಗೆ ಹೋಗುತ್ತವೆಯೋ ಅಂತಾ ಜನ ಪ್ರತಿಭಟನೆಯ ಹಾದಿ ತುಳಿದಿದ್ದಾರೆ.
ಇದನ್ನೂ ವೀಕ್ಷಿಸಿ: ಕೇರಳದ ಜೈ ಹಿಂದ್ ಚಾನೆಲ್ ಮತ್ತು ಡಿಕೆಶಿ..ಏನಿದರ ಗುಟ್ಟು..? ರಾಜಕೀಯ ಷಡ್ಯಂತ್ರ ಅಂದಿದ್ದೇಕೆ ಡಿಸಿಎಂ..?