ಕೊರೋನಾ ಕಾಟ: ಯಾದಗಿರಿ ಆಸ್ಪತ್ರೆಯಲ್ಲೂ ಆಕ್ಸಿಜನ್‌ ಕೊರತೆ

Aug 21, 2020, 4:06 PM IST

ಯಾದಗಿರಿ(ಆ.21): ಕಿಮ್ಸ್‌ ಆಸ್ಪತ್ರೆಯ ಬಳಿಕ ಯಾದಗಿರಿ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲೂ ಆಕ್ಸಿಜನ್‌ ಕೊರತೆಯುಂಟಾಗಿದೆ. ಆಕ್ಸಿಜನ್‌ ಕೊರೆತೆಯಿಂದಾಗಿ ಕೊರೋನಾ ರೋಗಿಗಳನ್ನ ಕಲಬುರಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗುತ್ತಿದೆ. 

ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಕೊರತೆಯಾಗದಂತೆ ನೋಡಿಕೊಂಡಿದ್ದೇವೆ: ಸಚಿವ ಕೆ. ಸುಧಾಕರ್‌

ವೈದ್ಯರು, ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ರೋಗಿಗಳು ಹೈರಾಣಾಗಿದ್ದಾರೆ. ಕೊರೋನಾ ಸೋಂಕಿತರಿಗೆ ನೀಡುವ ಲೋಮಾ ಇಂಜಕ್ಷನ್‌ ಕೂಡ ಖಾಲಿಯಾಗಿದೆ ಎಂದು ತಿಳಿದು ಬಂದಿದೆ. ಇದರಿಂದ ರೋಗಿಗಳು ಇನ್ನಿಲ್ಲದ ತೊಂದರೆಗಳನ್ನ ಅನುಭವಿಸುತ್ತಿದ್ದಾರೆ.