ಕೊರೋನಾ ಮಧ್ಯೆ ಸಂತಸದ ಸುದ್ದಿ: ಮೈಸೂರಿನಲ್ಲಿ ಕೇವಲ ಎರಡೇ ಪಾಸಿಟಿವ್‌ ಕೇಸ್‌..!

May 14, 2020, 12:31 PM IST

ಮೈಸೂರು(ಮೇ.14): ಕೊರೋನಾ ಆತಂಕದ ಮಧ್ಯೆ ಸಿಹಿ ಸುದ್ದಿಯೊಂದು ಬಂದಿದೆ. ಹೌದು, ಮೈಸೂರು ಜಿಲ್ಲೆಯಲ್ಲಿ ಇನ್ನೂ ಎರಡೇ ಎರಡು ಕೊರೋನಾ ಪಾಸಿಟಿವ್‌ ಕೇಸ್‌ಗಳಿಗೆ. 90 ಕೇಸ್‌ಗಳ ಪೈಕಿ ಈಗಾಗಲೇ 88  ಮಂದಿ ಗುಣಮುಖರಾಗಿ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಲಾಕ್‌ಡೌನ್‌ ಮತ್ತಷ್ಟು ಸಡಿಲವಾಗುತ್ತಿದೆ.

ಮನೆಯಲ್ಲೇ ಇರಿ.. ಮಹಾಮಾರಿ ಕೊರೋನಾ ಬಾಗಿಲಲ್ಲೇ ಇದೆ..!

ಇದ್ದ ನಾಲ್ಕು ರೋಗಿಗಳಲ್ಲಿ ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ವಾರ್ಜ್‌ ಆಗಿದ್ದಾರೆ. ಹೀಗಾಗಿ ಸದ್ಯ ಇಬ್ಬರಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ಇವರಿಬ್ಬರೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರೆ ಜಿಲ್ಲೆಯಲ್ಲಿ ಒಂದೂ ಕೊರೋನಾ ಪಾಸಿಟಿವ್‌ ಪ್ರಕರಣಗಳ ಇರೋದಿಲ್ಲ. ಹೀಗಾಗಿ ರೆಡ್‌ ಝೋನ್‌ನಿಂದ ಆರೇಂಜ್‌ ಝೋನ್‌ನತ್ತ ಹೊರಟಿದೆ.