ಮುಂಬೈನಿಂದ ಬಂದು ಕ್ವಾರೆಂಟೈನ್‌ನಲ್ಲಿದ್ದ 66ರ ವೃದ್ಧೆ ಸಾವು

May 20, 2020, 4:04 PM IST

ಮಂಡ್ಯ(ಮೇ 20): ಮಂಡ್ಯದ ನಾಗಮಂಗಲದಲ್ಲಿ ಕ್ವಾರೆಂಟೈನ್‌ನಲ್ಲಿದ್ದ 66 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ. ಇನ್ನೂ ಕೊರೋನಾ ರಿಫೊರ್ಟ್‌ಬಂದಿರಲಿಲ್ಲ. ಅದಕ್ಕೆ ಮೊದಲೇ ಅಂತ್ಯಕ್ರಿಯೆ ನಡೆಸಲಾಗಿದೆ.

ನಗರಕ್ಕೆ ದುಡಿಯಲು ಹೋದವರು ಹಳ್ಳಿಗಳಿಗೆ ವಾಪಸ್: ಅಂತಹ ಕಾರ್ಮಿಕರಿಗೆ ಗುಡ್ ನ್ಯೂಸ್..!

ಸೋಮನಹಳ್ಳಿ ಕ್ವಾರೆಂಟೈನ್‌ ಸೆಂಟರ್‌ನಲ್ಲಿದ್ದ ವೃದ್ಧೆಯ ಅಂತ್ಯ ಸಂಸ್ಕಾರದ ವೇಳೆ ನಿಯಮ ಉಲ್ಲಂಘಿಸಲಾಗಿದೆ. ಮುಂಬೈನಿಂದ ಬಂದು ಮಂಡ್ಯದಲ್ಲಿ ಕ್ವಾರೆಂಟೈನ್ ಆಗಿದ್ದರು. ವೃದ್ಧೆಯ ಶವದ ಮೇಲಿನಿಂದ ಅವರ ಪತಿ ಚಿನ್ನಾಭರಣವನ್ನು ಬಿಚ್ಚಿಕೊಂಡಿದ್ದಾರೆ. ಕೊರೋನಾ ವರದಿ ಬರುವ ಮುನ್ನವೇ ಅಂತ್ಯಸಂಸ್ಕಾರ ಮಾಡಲಾಗಿದೆ.