Jun 18, 2020, 2:00 PM IST
ಕೊಪ್ಪಳ(ಜೂ.18): ಮದುವೆಯಾದ ನಾಲ್ಕೇ ದಿನದಲ್ಲಿ ಪರೀಕ್ಷೆ ಬರೆದು ವಧು ಭೇಷ್ ಎನಿಸಿಕೊಂಡಿದ್ದಾಳೆ. ಜೂ.18ರಂದು ರಾಜ್ಯಾದ್ಯಂತ ಇಂಗ್ಲಿಷ್ ಪರೀಕ್ಷೆ ನಡೆಯುತ್ತಿದ್ದು, ಎಲ್ಲ ಮುಂಜಾಗೃತೆಗಳನ್ನು ನಡೆಸಿ ಪರೀಕ್ಷೆ ಬರೆಸಲಾಗುತ್ತಿದೆ.
ರಾಜಬೀದಿಗಳಲ್ಲಿ ಗದೆ ಹಿಡಿದು ಜನರ ಬೆದರಿಸಿದ ಯಮರಾಯ..!
ಕೊಪ್ಪಳದಲ್ಲಿ ನಾಲ್ಕು ದಿನದ ಹಿಂದೆ ವಿವಾಹಿತಳಾದ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆ ಬರೆದಿದ್ದಾಳೆ. ಮೆಹಂದಿ ಹಚ್ಚಿರುವ ಕೈಗಳಲ್ಲೇ ಪೆನ್ ಹಿಡಿದ ಯುವತಿ ಲಾಕ್‌ಡೌನ್ ಮಧ್ಯೆ ಶಿಕ್ಷಣದ ಮಹತ್ವ ಅರಿತು ಪರೀಕ್ಷೆ ಬರೆದಿದ್ದಾಳೆ. ಪರೀಕ್ಷೆ ಬರೆದು ನವ ವಧುವಿನ ಮಾತುಗಳು ಇಲ್ಲಿವೆ.