Jul 29, 2020, 6:14 PM IST
ಚಿಕ್ಕಮಗಳೂರು(ಜು.29): ಮೊದಲೇ ಕೊರೋನಾ ಸಂಕಷ್ಟದಿಂದ ಕಂಗಾಲಾಗಿರುವ ಕಾಫಿ ಬೆಳೆಗಾರರ ಮುಂದೆ ಮತ್ತೊಂದು ಸವಾಲು ದಿಢೀರ್ ಆಗಿ ಎದುರಾಗಿದೆ. ಚಿಕ್ಕಮಗಳೂರಿನಲ್ಲಿ ಕಾಫಿ ಗಿಡಗಳಿಗೆ ಕಾಂಡ ಕೊರಕ ರೋಗ ಬಾಧಿಸಲಾರಂಭಿಸಿದೆ.
ಕಾಂಡ ಕೊರಕ ರೋಗ ಬಾಧೆ ಹಿನ್ನೆಲೆಯಲ್ಲಿ ಬೆಳೆಗಾರರು ಕಾಫಿಗಿಡಗಳನ್ನು ಕಡಿದು ಬೆಂಕಿಹಾಕಿ ಸುಡುತ್ತಿರುವ ದೃಶ್ಯ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸರ್ವೇಸಾಮಾನ್ಯ ಎನಿಸಲಾರಂಭಿಸಿದೆ.
ಕೊರೋನಾ ಎಫೆಕ್ಟ್: 179 ವೃತ್ತಿಪರ ಕಾಲೇಜು ಬಂದ್!
ಚಿಕ್ಕಮಗಳೂರಿನ ಗಿರಿ ಶ್ರೇಣಿ ಭಾಗದ ಕಾಫಿ ತೋಟಗಳಲ್ಲಿ ವಿಪರೀತ ಎಂಬಂತೆ ಕಾಂಡಕೊರಕ ಹುಳುವಿನ ಬಾಧೆ ಕಾಣಿಸಿಕೊಳ್ಳಲಾರಂಭಿಸಿದೆ. ಅರೇಬಿಕ ಕಾಫಿ ಬೆಳೆಗಾರರು ಈ ರೋಗದಿಂದ ಕಂಗಾಲಾಗಿ ಹೋಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.